ಲಖನೌ:ಪತ್ನಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಾಗುತ್ತಿರುವುದನ್ನು ಸಹಿಸಲಾಗದೆ ಮಕ್ಕಳ ಮುಂದೆ ಆಕೆಯನ್ನು ಪತಿಯೇ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ.ಇದನ್ನೂ ಓದಿ:ಅಪರಿಚಿತರಿಂದ ಲಿಫ್ಟ್ ತೆಗೆದುಕೊಳ್ಳಲು ಹೋಗಿ 13 ಗ್ರಾಂ ಚಿನ್ನದ ಸರ ಕಳೆದುಕೊಂಡ ಮಹಿಳೆ..!
ಮೋನಿಕಾ ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ಮಹಿಳೆಯ ತಂದೆಯ ತಹೀರ್ ಮೇಲೆ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ರಾಹುಲ್ ಎಂಬಾತನೇ ಹೆಂಡತಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ.
ಘಟನೆ ಹಿನ್ನೆಲೆ:ಉನ್ನಾವೋ ಜಿಲ್ಲೆಯ ಸಫಿಪುರದ ನಿವಾಸಿ ರಾಹುಲ್, ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು 2008ರಲ್ಲಿ ರಾಯ್ ಬರೇಲಿ ನಿವಾಸಿ ಮೋನಿಕಾ ಜತೆ ಪ್ರೇಮ ವಿವಾಹವಾಗಿದ್ದನು. ಈ ದಂಪತಿಗಳಿಗೆ ಒಬ್ಬ ಮಗ ಮತ್ತು ಮಗಳು ಇದ್ದು, ಮೋನಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಳು. ಅಲ್ಲದೇ, ಇನ್​ಸ್ಟಾಗ್ರಾಮ್​​ನಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಳು.ಇದನ್ನೂ ಓದಿ:ಜ್ವರದಿಂದ ಬಳಲುತ್ತಿರುವ ಮಗುವಿಗೆ ರೇಬೀಸ್ ಲಸಿಕೆ ನೀಡಿದ ನರ್ಸ್: ಮುಂದೆ ನಡೆದಿದ್ದಿಷ್ಟು..ಮೋನಿಕಾ ಪ್ರತಿದಿನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು, ವಿಡಿಯೋಗಳು ಮತ್ತು ರೀಲ್‌ಗಳನ್ನು ಅಪ್‌ಲೋಡ್ ಮಾಡುತ್ತಿದ್ದು, ಇದನ್ನು ರಾಹುಲ್​ ಕೂಡ ಗಮನಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತನ್ನ ಅನುಪಸ್ಥಿತಿಯಲ್ಲಿ ಮೋನಿಕಾ ತನ್ನ ಅನುಯಾಯಿಯನ್ನು ಭೇಟಿಯಾಗುತ್ತಾಳೆ ಎಂದು ಆರೋಪಿಯು ಶಂಕಿಸಿದ್ದು, ಶನಿವಾರ ರಾತ್ರಿ ಮಕ್ಕಳ ಸಮೇತ ತಮ್ಮ ಕಾರಿನಲ್ಲಿ ರಾಯ್ ಬರೇಲಿಗೆ ತೆರಳಿದ್ದ ವೇಳೆ ದಾರಿಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ನಡುವೆ ರಾಹುಲ್​ ಸಿಟ್ಟಿಗೆದ್ದು ರಸ್ತೆಬದಿಯಲ್ಲಿ ಕಾರನ್ನು ನಿಲ್ಲಿಸಿ ಮೋನಿಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಈ ವೇಳೆ ಆತನ ಮಕ್ಕಳಿಬ್ಬರೂ ಕಾರಿನಲ್ಲಿದ್ದು, ಮಕ್ಕಳು ತಾಯಿಯನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಬಳಿಕ ಕೊಲೆ ಬಗ್ಗೆ ಗಸ್ತು ತಂಡದಿಂದ ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ರಾಹುಲ್ ವಿರುದ್ಧ ಮೋನಿಕಾ ತಂದೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
