ಉದಯಪುರ:ಪಾತಕಿಗಳಿಂದ ಹತ್ಯೆಯಾದ ಟೈಲರ್​ ಕನ್ಹಯ್ಯ ಲಾಲ್​ ಅವರ ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಘೋಷಿಸಿದ್ದಾರೆ.
ರಾಜಸ್ಥಾನ ಸಂಪುಟ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದ್ದು, ಕನ್ಹಯ್ಯ ಏಕೈಕ ಆಧಾರವಾಗಿದ್ದರಿಂದ ಮಕ್ಕಳಿಗೆ ನೌಕರಿ ನೀಡಲು ಸರ್ಕಾರ ಮುಂದಾಗಿದೆ.
ಕನ್ಹಯ್ಯಲಾಲ್​ ಅವರ ಇಬ್ಬರು ಪುತ್ರರಾದ ಯಶ್​ ತೇಲಿ ಮತ್ತು ತರುಣ್​ ತೇಲಿ ಅವರನ್ನು ಸರ್ಕಾರಿ ಸೇವೆಗೆ ನೇಮಕ ಮಾಡಿಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್​​ ಟ್ವೀಟ್​ ಮಾಡಿದ್ದಾರೆ.
ಮೃತ ಕನ್ಹಯ್ಯ ಲಾಲ್ ಅವರ ಕುಟುಂಬದ ಜೀವನೋಪಾಯಕ್ಕೆ ಬೇರೆ ಯಾವುದೇ ಮೂಲವಿಲ್ಲ. ಅವರ ಅವಲಂಬಿತರಿಗೆ ಕೆಲಸ ನೀಡಿದರೆ ಅವರ ಜೀವನ ಸುಗಮವಾಗಿ ನಡೆಯಲಿದೆ. ಕುಟುಂಬಕ್ಕೆ ಆರ್ಥಿಕ ಮತ್ತು ಮಾನಸಿಕ ಸಹಾಯ ಸಿಗಲಿದೆ ಗೆಹ್ಲೋಟ್​ ಹೇಳಿದ್ದಾರೆ.
ಜೂನ್ 28ರಂದು ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಇರಿದು ಕೊಲೆ ಮಾಡಲಾಗಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.(ಏಜೆನ್ಸೀಸ್​)
ಲಂಚ ಪ್ರಕರಣ: ಟಾಟಾದ ಐವರು ಅಧಿಕಾರಿಗಳು ಸೇರಿ 6 ಮಂದಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
