ರಾಜಸ್ಥಾನ:ಮಕ್ಕಳು ಆಟವಾಡುತ್ತಾ ಸಣ್ಣಪುಟ್ಟ ವಸ್ತುಗಳನ್ನು ನುಂಗುತ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುತ್ತಾ ಟೂತ್‌ಬ್ರಶ್‌ನ್ನೇ ನುಂಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.
ಗೋಪಾಲ್ ಸಿಂಗ್ ರಾವ್ (53) ಹಲ್ಲುಜ್ಜುತ್ತಿದ್ದಾಗ ಟೂತ್ ಬ್ರಷ್ ಗಂಟಲಿನೊಳಗೆ ಹೋಗಿದೆ. ಈತ ಉದಯಪುರದ ಚಿತ್ತೋರ್‌ನ ನಿವಾಸಿಯಾಗಿದ್ದಾನೆ.
ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!
ಗೋಪಾಲ್ ಹಲ್ಲುಜ್ಜುತ್ತಿದ್ದಾಗ ಟೂತ್ ಬ್ರಷ್ ಹೊಟ್ಟೆಯೊಳಗೆ ಹೋಗಿದೆ. ತಕ್ಷಣ ಬಾಯಿಯೊಳಗೆ ಕೈ ಹಾಕಿ ಅದನ್ನು ಹೊರತೆಗೆಯೋಣ ಅಂದುಕೊಂಡರೆ ಬ್ರಶ್ ಹೊಟ್ಟೆಯೊಳಗೆ ಜಾರಿ ಹೋಗಿದೆ. ತಕ್ಷಣ ಗೋಪಾಲ್‌ ಸಿಂಗ್‌ಗೆ ಉಸಿರುಗಟ್ಟೋಕೆ ಆರಂಭವಾಯಿತು. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?ಆದರೆ ಅಲ್ಲಿನ ವೈದ್ಯರು ಟೂತ್ ಬ್ರಶ್ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಗೋಪಾಲ್‌ ಸಿಂಗ್‌ನ್ನು ಅಮೆರಿಕನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ರಷ್ ಹೊಟ್ಟೆಯಲ್ಲಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಶಸ್ತ್ರಚಿಕಿತ್ಸಕ ಡಾ. ಶಶಾಂಕ್ ಜೆ ತ್ರಿವೇದಿ ಅವರ ತಂಡವು ಎಂಡೋಸ್ಕೋಪಿಕ್ ವಿಧಾನದಿಂದ ಬ್ರಶ್‌ನ್ನು ತೆಗೆದುಹಾಕಲು ನಿರ್ಧರಿಸಿತು. ಅಚ್ಚರಿಯ ವಿಚಾರವೆಂದರೆ. ಶಸ್ತ್ರಚಿಕಿತ್ಸೆಯಿಲ್ಲದೆ ವೈದ್ಯರು ಹಲ್ಲುಜ್ಜುವ ಬ್ರಷ್ ಅನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.
ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
