ಜೈಪುರ:ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಟೈಲರ್​ ಕನ್ಹಯ್ಯ ಲಾಲ್​ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ಇಬ್ಬರು ಆರೋಪಿಗಳಿಗೂ ಬಿಜೆಪಿಗೂ ನಂಟಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವರ್ಷ ಜೂನ್​ 28ರಂದು ಗ್ರಾಹಕರ ಸೋಗಿನಲ್ಲಿ ಕನ್ಹಯ್ಯ ಲಾಲ್​ ಅವರು ಅಂಗಡಿಗೆ ತೆರಳಿದ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯರ ತಲೆಯನ್ನು ಕತ್ತರಿಸುವ ಮೂಲಕ ದುಷ್ಕೃತ್ಯ ಎಸಗಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಶ್ಲೋಕ್​ ಗೆಹ್ಲೋಟ್​ ಅವರು ಗಂಭೀರ ಆರೋಪ ಮಾಡಿದ್ದು, ಆರೋಪಿಗಳಿಗೆ ಬಿಜೆಪಿ ಜತೆ ನಂಟಿದೆ. ಕನ್ಹಯ್ಯ ಲಾಲ್ ಹತ್ಯೆಗೂ ಕೆಲವು ದಿನಗಳ ಮೊದಲು ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಈ ವೇಳೆ ಅವರನ್ನು ಬಿಡುಗಡೆ ಮಾಡಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ರಾಜಸ್ಥಾನ ಸಿಎಂ ಆರೋಪಿಸಿದ್ದಾರೆ.
ನ. 25 ರಂದು ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಗೆಹ್ಲೋಟ್​ ಆರೋಪಿಸಿದ್ದಾರೆ.
ರಾಜಸ್ಥಾನದಲ್ಲಿ ಸದ್ಯ ಚುನಾವಣಾ ಪ್ರಚಾರದ ಭರಾಟೆ ನಡೆಯುತ್ತಿದ್ದು, ಗುರುವಾರ ಉದಯಪುರದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟೈಲರ್​ ಕನ್ಹಯ್ಯಾ ಲಾಲ್​ ಹತ್ಯೆಯನ್ನು ಉಲ್ಲೇಖಿಸಿ ಕಾಂಗ್ರೆಸ್​ಗೆ ತಿರುಗೇಟ ನೀಡಿದರು. ಕಾಂಗ್ರೆಸ್​ ಉಗ್ರರ ಮೇಲೆ ಸಹಾನುಭೂತಿಯನ್ನು ಹೊಂದಿದೆ. ರಾಜ್ಯ ಸರ್ಕಾರಕ್ಕೆ ಕನ್ಹಯ್ಯ ಕೊಲೆ ಒಂದು ದೊಡ್ಡ ಕಲೆಯಾಗಿ ಉಳಿದುಕೊಂಡಿದೆ. ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ಕಾಂಗ್ರೆಸ್ ಸರ್ಕಾರವಿರುವುದರಿಂದ ಉದಯಪುರದಲ್ಲಿ ಇಂತಹ ಹೇಯ ಘಟನೆ ನಡೆದಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಪ್ರಧಾನಿ ಮಾತಿಗೆ ಭಾನುವಾರ ಪ್ರತಿಕ್ರಿಯಿಸಿದ ಗೆಹ್ಲೋಟ್, ಬಿಜೆಪಿಯು ಈಗಾಗಲೇ ಚುನಾವಣೆಯಲ್ಲಿ ಸೋಲನ್ನು ಅರಿತುಕೊಂಡಿದೆ. ಹೀಗಾಗಿ ವಿಚಿತ್ರವಾದ ಹೇಳಿಕೆಗಳನ್ನು ನೀಡುತ್ತಿದೆ. ನಾವು ಪ್ರಾರಂಭಿಸಿದ ಯೋಜನೆಗಳು ಮತ್ತು ನಾವು ತಂದ ಕಾನೂನುಗಳ ಬಗ್ಗೆ ಅವರು ಒಂದು ಮಾತನ್ನೂ ಮಾತನಾಡುತ್ತಿಲ್ಲ. ಅವರು ಚುನಾವಣೆಗೆ ಮುಂಚಿತವಾಗಿ ಗೊಂದಲವನ್ನು ಹುಟ್ಟುಹಾಕಲು ಬಯಸುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ಹಯ್ಯ ಲಾಲ್ ಹತ್ಯೆಯ ತನಿಖೆಯ ಕುರಿತು ಮಾತನಾಡಿದ ಗೆಹ್ಲೋಟ್, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗಿಂತ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಒಜಿ) ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಹೇಳಿದರು. ಈ ಪ್ರಕರಣದಲ್ಲಿ ಎನ್‌ಐಎ ಯಾವ ಕ್ರಮ ಕೈಗೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮ ಎಸ್​ಒಜಿ ಪ್ರಕರಣವನ್ನು ಮುಂದುವರಿಸಿದ್ದರೆ, ಅಪರಾಧಿಯನ್ನು ಇಷ್ಟು ಹೊತ್ತಿಗೆ ನ್ಯಾಯಾಂಗಕ್ಕೆ ತರಲಾಗುತ್ತಿತ್ತು ಎಂದು ಸಿಎಂ ಗೆಹ್ಲೋಟ್ ಹೇಳಿದರು.
ಕೊಲೆ ಮಾಡಿದ್ದೇಕೆ?ಬಿಜೆಪಿ ನಾಯಕಿ ನೂಪುರ್​ ಶರ್ಮಾ, ಪ್ರವಾದಿ ಮುಹಮ್ಮದ್​ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಈ ವೇಳೆ ನೂಪುರ್​ ಶರ್ಮ ಬೆಂಬಲಿಸಿ ಕನ್ಹಯ್ಯ ಪೋಸ್ಟ್​ ಹಾಕಿದ್ದಾರೆ ಅಂತ ಗ್ರಾಹಕರ ಸೋಗಿನಲ್ಲಿ ಕನ್ಹಯ್ಯ ಲಾಲ್​ ಅಂಗಡಿಗೆ ತೆರಳಿದ ಇಬ್ಬರು ದುಷ್ಕರ್ಮಿಗಳು ಅವರ ತಲೆಯನ್ನು ಕತ್ತರಿಸುವ ಮೂಲಕ ದುಷ್ಕೃತ್ಯ ಎಸಗಿದ್ದರು. ಆದರೆ, ಪೋಸ್ಟ್​ ಹಾಕಿದ್ದು ಕನ್ಹಯ್ಯ ಅವರಲ್ಲ. ಬದಲಾಗಿ 18 ವರ್ಷದ ಅವರ ಮಗನಾಗಿದ್ದ. ಕೊಲೆಯ ನಂತರ ಸ್ಥಳದಿಂದ ಪರಾರಿಯಾಗಿದ್ದರು. ಗೌಸ್ ಮೊಹಮ್ಮದ್ ಮತ್ತು ರಿಯಾಸ್ ಅಟ್ಟಾರಿ ಎಂಬ ಇಬ್ಬರು ವ್ಯಕ್ತಿಗಳು ನಂತರ ವೀಡಿಯೊವನ್ನು ರೆಕಾರ್ಡ್ ಮಾಡಿ, ಕನ್ಹಯ್ಯರನ್ನು ಕೊಂದಿರುವುದಾಗಿ ಒಪ್ಪಿಕೊಂಡರು. ನಂತರ ಅವರನ್ನು ಬಂಧಿಸಲಾಯಿತು.(ಏಜೆನ್ಸೀಸ್​)
ಹಿಂದು ಹತ್ಯೆ ಕೇಸ್​: ಉದಯಪುರದಲ್ಲಿ 144 ಸೆಕ್ಷನ್​ ಜಾರಿ, ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದು ಕೊಲೆಯಾದ ವ್ಯಕ್ತಿಯಲ್ಲ

Gold, Silver Price; ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸಿ ಹಬ್ಬದ ಸಂಭ್ರಮ ಡಬಲ್ ಮಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
