ಮುಂಬೈ:ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಮಂಗಳವಾರ ವಾಶಿಮ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಾವರ್ಕರ್ ಬಿಜೆಪಿ ಮತ್ತು ಆರೆಸ್ಸೆಸ್​ನ ಸಂಕೇತವಾಗಿದ್ದಾರೆ ಎಂದು ಹೇಳಿದ್ದರು. ‘ಅವರು ಎರಡು ಮೂರು ವರ್ಷಗಳ ಕಾಲ ಅಂಡಮಾನ್‌ನಲ್ಲಿ ಜೈಲಿನಲ್ಲಿದ್ದರು. ಜೈಲಿಂದ ಹೊರ ಬರಲು ಅವರು ಕ್ಷಮಾದಾನ ಅರ್ಜಿಯನ್ನು ಬರೆದಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.
ರಾಹುಲ್​ ಗಾಂಧಿ ‘ಸಾವರ್ಕರ್ ಅವರು ತಮ್ಮ ಹೆಸರು ಬದಲಾಯಿಸಿ ಪುಸ್ತಕ ಬರೆದು ತಾವು ಎಷ್ಟು ಧೈರ್ಯಶಾಲಿ ಎಂದು ತೋರಿಸಿದ್ದಾರೆ. ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು. ಅವರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು’ ಎಂದು ವ್ಯಂಗ್ಯವಾಡಿದರು.
ಈ ಹೇಳಿಕೆ ಶಿವಸೇನೆ ಮತ್ತು ಕಾಂಗ್ರೆಸ್​ ನಡುವೆ ಬಿರುಕು ಮೂಡಿಸುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ರಾಹುಲ್​ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಒಂದು ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ‘ನಮ್ಮ ಪಕ್ಷಕ್ಕೆ ಸಾವರ್ಕರ್​ ಬಗ್ಗೆ ಅಪಾರ ಗೌರವವಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್​ ಬಗ್ಗೆ ರಾಹುಲ್​ ಗಾಂಧಿ ನೀಡಿದ ಹೇಳಿಕೆಯನ್ನು ನಮ್ಮ ಪಕ್ಷ ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.
ಜೊತೆಗೆ ‘ಬಿಜೆಪಿ ಮತ್ತು ಆರೆಸ್ಸೆಸ್​ಗೆ ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವುದೇ ಸಂಬಂಧವಿಲ್ಲ. ಅಪ್ಪ ಮಕ್ಕಳ (ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಸೂಚಿಸುತ್ತಾ) ಸಾವರ್ಕರ್‌ ಪ್ರೀತಿಯನ್ನು ನೋಡಿದಾಗ ನಗು ಬರುತ್ತದೆ’ ಎಂದು ಉದ್ಧವ್​ ಠಾಕ್ರೆ ಬಿಜೆಪಿ ಕಾಲೆಳೆದಿದ್ದಾರೆ.(ಏಜೆನ್ಸೀಸ್​)
ಮೆಟಾ ಇಂಡಿಯಾಗೆ ಹೊಸ ಮುಖ್ಯಸ್ಥೆ; ಇವರೂ ಭಾರತೀಯರೇ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
