ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಅಯೋಧ್ಯೆಗೆ ಭೇಟಿ ಕೊಡಲು ಆಮಂತ್ರಣದ ಅಗತ್ಯವೇ ಇಲ್ಲ ಎಂದು ಶಿವಸೇನಾ ಸಂಸದ ಸಂಜಯ್​ ರಾವತ್​ ಹೇಳಿದ್ದಾರೆ.ಠಾಕ್ರೆಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಯೋಧ್ಯೆಗೆ ತೆರಳಿದ್ದರು. ರಾಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆಗಳನ್ನು ಶಿವಸೇನೆಯೇ ತೊಡೆದು ಹಾಕಿದೆ. ಹಾಗಾಗಿ, ಅಲ್ಲಿಗೆ ಹೋಗಬೇಕೆಂದರೆ ಆಹ್ವಾನ, ಆಮಂತ್ರಣಗಳು ಬೇಕಿಲ್ಲ ಎಂದು ರಾವತ್​ ತಿಳಿಸಿದ್ದಾರೆ.
ಠಾಕ್ರೆಯವರು ಅಯೋಧ್ಯೆಗೆ ಯಾವಾಗಲೂ ಹೋಗುತ್ತಿರುತ್ತಾರೆ. ಅದು ರಾಜಕೀಯಕ್ಕೆ ಸಂಬಂಧಪಟ್ಟ ಭೇಟಿಯಾಗಲಿ, ವಿಷಯವಾಗಲಿ ಅಲ್ಲ. ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲೂ ಕೂಡ ಅವರು ಅಲ್ಲಿಗೆ ಹೋಗುತ್ತಿದ್ದರು. ಶಿವ ಸೈನಿಕರಿಗೆ ಅಯೋಧ್ಯೆಯೊಂದಿಗೆ ವಿಶೇಷ ನಂಟು ಇದೆ. ಹಿಂದುತ್ವಕ್ಕಾಗಿ ತ್ಯಾಗವನ್ನೂ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಶಿವಸೇನೆ ಮುಖ್ಯಮಂತ್ರಿಗೂ ಆಹ್ವಾನ ನೀಡಬಹುದಾ ಎಂಬ ಕುತೂಹಲ, ಚರ್ಚೆ ಹುಟ್ಟಿದ ಬೆನ್ನಲ್ಲೇ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಂಜಯ್​ ರಾವತ್​ ಹೀಗೆ ಉತ್ತರಿಸಿದ್ದಾರೆ.ಇದನ್ನೂ ಓದಿ:ದೇಶದಲ್ಲಿ ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು; ಮೂರೇ ದಿನದಲ್ಲಿ ಲಕ್ಷ ದಾಟಿತು
ಇನ್ನು ಕೇಂದ್ರ ಮಾಜಿ ಸಚಿವ ಅರವಿಂದ್​ ಸಾವಂತ್​ ಕೂಡ ಇದನ್ನೇ ಹೇಳಿದ್ದಾರೆ. ಅವರು ನಮಗೆ ಆಮಂತ್ರಣ ಕೊಡಲಿ ಬಿಡಲಿ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ರಾಮನೊಂದಿಗೆ ನಮಗೆ ನೇರವಾಗಿ ಸಂಬಂಧ ಇದೆ. ರಾಮ ಮಂದಿರಕ್ಕಾಗಿ ನಾವೂ ಹೋರಾಟ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
‘ಮಸೀದಿಗಳಲ್ಲಿ ನಮಾಜ್ ಮಾಡೋಕೆ ಬಿಟ್ಟು ನೋಡಿ, ಕರೊನಾ ಮಂಗಮಾಯ’- ಸಂಸದ ಶಫಿಕರ್ ರೆಹಮಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 7 =
Remember me
