ಮುಂಬೈ:ಉದ್ಧವ್ ಠಾಕ್ರೆ ಔರಂಗಜೇಬ್ ಅಭಿಮಾನಿಗಳ ಸಂಘದ ನಾಯಕ. ಔರಂಗಜೇಬ್ ಅಭಿಮಾನಿಗಳ ಸಂಘದಿಂದ ದೇಶದ ಭದ್ರತೆಯನ್ನು ಖಾತ್ರಿಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಇದನ್ನು ಓದಿ:ನಮ್ಮ ಮನೆ ಬಾಗಿಲು ತಟ್ಟುವ ಅಸಹಾಯಕರಿಗೆ ಆಶ್ರಯ ನೀಡಲು ಸಿದ್ಧ; ಮಮತಾ ಬ್ಯಾನರ್ಜಿ
ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ಬಿಜೆಪಿ ಅಧಿವೇಶನದಲ್ಲಿ ಮಾತನಾಡಿದ ಅವರು, ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಉತ್ತರಾಧಿಕಾರಿ ಎಂದು ಕರೆಸಿಕೊಳ್ಳುವ ಉದ್ಧವ್ ಠಾಕ್ರೆ ಕಸಬ್‌ಗೆ ಬಿರಿಯಾನಿ ತಿನ್ನಿಸಿದ ಜನರೊಂದಿಗೆ ಕುಳಿತಿದ್ದಾರೆ. ಝಾಕಿರ್ ನಾಯ್ಕ್ ಬೆಂಬಲಿಗರ ಮಡಿಲಲ್ಲಿ ಕುಳಿತಿದ್ದೀರಿ. ಯಾಕೂಬ್ ಬಿಡುಗಡೆಗೆ ಒತ್ತಾಯಿಸುವ ಜನರೊಂದಿಗೆ ನೀವು ಕುಳಿತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದರು. ಅಲ್ಲದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಎನ್‌ಸಿಪಿ ಅಧ್ಯಕ್ಷ ಶರದ್​ ಪವಾರ್​​​ ಬಗ್ಗೆ ಮಾತನಾಡಿದ ಅವರು, ರಾಜಕೀಯ ಭ್ರಷ್ಟಾಚಾರದ ಮಾಸ್ಟರ್ ಮೈಂಡ್ ಎಂದು ಕರೆದರು. ಪವಾರ್ ಸಾಹೇಬರು ಹೊಸ ಭ್ರಮೆ ಹುಟ್ಟು ಹಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಮರಾಠರಿಗೆ ಮೀಸಲಾತಿ ಸಿಗುತ್ತದೆ. ಶರದ್ ಪವಾರ್ ಸರ್ಕಾರ ಬಂದಾಗಲೆಲ್ಲಾ ಮರಾಠ ಮೀಸಲಾತಿ ಮುಗಿಯುತ್ತದೆ. ಗೊಂದಲ ಸೃಷ್ಟಿಸಿ ಚುನಾವಣೆ ಗೆಲ್ಲಲು ಬಯಸುತ್ತಿದ್ದಾರೆ. ಶರದ್ ಪವಾರ್ ಭಾರತದ ರಾಜಕೀಯದಲ್ಲಿ ಭ್ರಷ್ಟಾಚಾರದ ದೊಡ್ಡ ದೊರೆ ಎಂದು ಟೀಕಿಸಿದ್ದಾರೆ.
#WATCH| Pune: Union HM Amit Shah says, "…This Aurangzeb Fan Club cannot ensure the security of the country. Who is this Aurangzeb Fan Club? It is (Maha Vikas) Aghadi and Uddhav Thackeray is the leader of the Aurangzeb Fan Club. Uddhav Thackeray who calls himself Balasaheb's…pic.twitter.com/llpjSWuPqX
ವಿರೋಧ ಪಕ್ಷದ ನಾಯಕ ರಾಹುಲ್​ಗಾಂಧಿ ಸೋತರೂ ದುರಹಂಕಾರಿಯಾಗಿದ್ದಾರೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ನಲ್ಲಿ ಗೆದ್ದರೆ ರಾಹುಲ್​​ಗಾಂಧಿ ಅವರ ದುರಂಹಕಾರ ಛಿದ್ರವಾಗಲಿದೆ. ನಾವು ಅಧಿಕಾರ ಪಡೆಯುವ ಉದ್ದೇಶದಿಂದ ಕೆಲಸ ಮಾಡುವವರಲ್ಲ. ಬಿಜೆಪಿ ಪಕ್ಷವನ್ನು ಸಿದ್ಧಾಂತದೊಂದಿಗೆ ಸ್ಥಾಪಿಸಲಾಗಿದೆ. ಮುಂದಿನ 15 ವರ್ಷಗಳ ಕಾಲ ದೇಶದಲ್ಲಿ ಬಿಜೆಪಿ ಸರ್ಕಾರ ಇರಲಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​​)
ಕಬ್ಬಿಣಾಂಶ ಹೇರಳವಾಗಿರುವ ಆಹಾರ ಇದೇ ನೋಡಿ; ರಕ್ತಹೀನತೆ ನಿವಾರಿಸಲು ಇರುವ ಸಿಂಪಲ್​​​​ವೇ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
