ನವದೆಹಲಿ:ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣಗಳಾಗಿ ಒಡೆದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆ ಬಗ್ಗೆ ಎದ್ದಿದ್ದ ತಕರಾರಿಗೆ ಚುನಾವಣಾ ಆಯೋಗ ಶುಕ್ರವಾರ ಅಂತ್ಯಹಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಶಿವಸೇನೆ ಎಂಬ ಪಕ್ಷದ ಹೆಸರು, ಪಕ್ಷದ ಮೂಲ ಚಿಹ್ನೆಯಾದ ಬಿಲ್ಲು ಬಾಣವನ್ನು ನೀಡಿ, ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
2022 ರ ಜೂನ್​ನಲ್ಲಿ ಏಕನಾಥ ಶಿಂಧೆ ಬಂಡಾಯವೆದ್ದಾಗ ಶಿವಸೇನೆ ಎರಡು ಬಣಗಳಾಗಿತ್ತು. ಶಿಂಧೆ ಬಂಡಾಯದ ಪರಿಣಾಮ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿ ಉದ್ಧವ್ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಶಿಂಧೆಯವರು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2019ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 55 ಅಭ್ಯರ್ಥಿಗಳ ಪೈಕಿ ಶೇ.76ರಷ್ಟು ಮಂದಿ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಪರವಾಗಿ ಶೇ. 23 ಮಂದಿ ಮಾತ್ರ ಇದ್ದಾರೆ. ಹಾಗಾಗಿ ಏಕನಾಥ ಬಣಕ್ಕೆ ಶಿವಸೇನೆಯ ಚಿಹ್ನೆ ನೀಡಲಾಗಿದೆ ಎಂದು ಆಯೋಗ ಹೇಳಿದೆ. ಉದ್ಧವ್ ಠಾಕ್ರೆ ಬಣಕ್ಕೆ ಕಳೆದ ವರ್ಷ ನೀಡಲಾದ ‘ಉರಿಯುತ್ತಿರುವ ಜ್ಯೋತಿ’ ಚಿಹ್ನೆಯನ್ನು ಉಳಿಸಿಕೊಳ್ಳಲು ಆಯೋಗ ಅನುಮತಿ ನೀಡಿದೆ. ಇದಕ್ಕೂ ಮುಂಚೆ ಶಿಂಧೆ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿ ಚಿಹ್ನೆ ನೀಡಲಾಗಿತ್ತು.
‘ನಮ್ಮ ಬಣವನ್ನೇ ನಿಜವಾದ ಶಿವಸೇನೆ ಎಂದು ಘೋಷಿಸಿದ್ದಕ್ಕೆ ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಮಹತ್ವವಿದೆ. ಇದು ಅವರ (ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ) ಸಿದ್ಧಾಂತಕ್ಕೆ ಸಂದ ಜಯವಾಗಿದೆ. ನಮ್ಮದೇ ನಿಜವಾದ ಶಿವಸೇನೆಯಾಗಿದೆ’ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ.
‘ಇಂತಹ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು. ನಮಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ’ ಎಂದು ಠಾಕ್ರೆ ಬಣದ ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಈ ನಿರ್ಧಾರವನ್ನು ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಿದೆ ಎಂದು ಅವರು ಹೇಳಿದ್ದಾರೆ.
ಪ್ರೇಮಿಗಳ ದಿನ ರೆಸ್ಟೋರೆಂಟ್​ನಲ್ಲಿ ಬಾಯ್​ಫ್ರೆಂಡ್​ ಜತೆ ಸಿಕ್ಕಿಬಿದ್ದ ಮಗಳು! ನಂತರ ನಡೆದಿದ್ದು ಹೈಡ್ರಾಮ

ಪಾಲಕರ ವಿರೋಧ ಲೆಕ್ಕಿಸದೇ ಪಾರ್ಶ್ವವಾಯು ಪೀಡಿತ ಪ್ರಿಯಕರನ್ನು ಮದ್ವೆಯಾಗಿದ್ದ ಸಹನಾಗೆ ಭಾರೀ ಆಘಾತ

ಸೌತ್ ಇಂಡಿಯಾ ಹೀರೋಗೆ ಮುಂಬೈ ನಾಯಕಿ; ಗ್ಲಾಮರಸ್ ನಟಿಯ ಪಾತ್ರದಲ್ಲಿ ಊರ್ವಶಿ ಜಯನ್ ಅಭಿನಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
