ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರಿಗೆ ಅಪರಿಚಿತನೋರ್ವ ಕರೆ ಮಾಡಿ, ಬಾಂದ್ರಾದಲ್ಲಿರುವ ಅವರ ನಿವಾಸ ಮಾತೋಶ್ರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತಾನು ದುಬೈನಿಂದ ಕರೆ ಮಾಡುತ್ತಿರುವುದಾಗಿಯೂ ತಿಳಿಸಿದ್ದಾನೆ.ತನ್ನನ್ನು ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಸಹಚರ ಎಂದು ಹೇಳಿಕೊಂಡಿರುವ ಆತ ಶನಿವಾರ ಸಂಜೆಯಿಂದ ಸುಮಾರು ನಾಲ್ಕು ಬಾರಿ ಉದ್ಧವ್​ ಠಾಕ್ರೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ 10.30ರ ಹೊತ್ತಿಗೆ ಆತ ಎರಡು ಬಾರಿ ಕರೆ ಮಾಡಿದ ನಂತರ, ಬಾಂದ್ರಾದ ಕಲನಗರ ಕಾಲನಿಯಲ್ಲಿರುವ ಉದ್ಧವ್​ ಠಾಕ್ರೆ ನಿವಾಸದ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.ಇದನ್ನೂ ಓದಿ:ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!
ಈತನ ಕರೆಯನ್ನು ಟೆಲಿಫೋನ್​ ಆಪರೇಟರ್​ ಮೊದಲು ಸ್ವೀಕರಿಸಿದ್ದಾರೆ. ದಾವೂದ್​ ಇಬ್ರಾಹಿಂ ಕಡೆಯಿಂದ ಮಾತನಾಡುತ್ತಿದ್ದೇನೆ. ದಾವೂದ್​ಗೆ ಸಿಎಂ ಉದ್ಧವ್​ ಠಾಕ್ರೆ ಬಳಿ ಮಾತನಾಡುವುದಿದೆ ಫೋನ್​ ಕನೆಕ್ಟ್​ ಮಾಡಿ ಎಂದು ಆತ ಹೇಳಿದ್ದಾನೆ. ಆದರೆ ಟೆಲಿಫೋನ್​ ಆಪರೇಟರ್​ ಸಿಎಂಗೆ ಫೋನ್​ ಕನೆಕ್ಟ್ ಮಾಡಲಿಲ್ಲ. ಆತ ಮತ್ತೆ ಕಾಲ್​ ಮಾಡಿ, ನಿವಾಸವನ್ನೇ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನಮಗೆ ವಿಷಯ ತಿಳಿಸಿದ ನಂತರ ಭದ್ರತೆ ಹೆಚ್ಚಿಸಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ. ಹಾಗೇ, ನಿಜಕ್ಕೂ ದಾವೂದ್​ ಕಡೆಯಿಂದಲೇ ಕರೆ ಬಂದಿದ್ದಾ? ದುಬೈನಿಂದ ಫೋನ್​ ಮಾಡಿದ್ದನಾ ಎಂಬುದರ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)
ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕಾನ್ಸಲ್​ ಜನರಲ್​ ಆಗಿ ಜ್ಯುಡಿತ್​ ರೇವಿನ್ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
