ಮುಂಬೈ:ಲಾಕ್​ಡೌನ್​ 4.0ದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಬಹುತೇಕ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.
ಕೇಂದ್ರದಿಂದ ಮಾರ್ಗಸೂಚಿ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರಗಳೂ ಕೂಡ ತಮ್ಮಲ್ಲಿನ ಪರಿಸ್ಥಿತಿಗೆ ಅನ್ವಯ ಆಗುವಂತೆ ಲಾಕ್​ಡೌನ್​ ಸಡಿಲಿಕೆ ಮಾಡಿಕೊಳ್ಳುವ ಜತೆ ಕೊವಿಡ್​-19 ನಿಯಂತ್ರಣಾ ಕ್ರಮಗಳನ್ನೂ ಕೈಗೊಳ್ಳುತ್ತಿವೆ.ಇದೀಗ ದೇಶದಲ್ಲಿ ಅತ್ಯಂತ ಹೆಚ್ಚು, ಅಂದರೆ 35,000 ಕೊವಿಡ್​ ಸೋಂಕಿತರು ಇರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಆನ್​ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊವಿಡ್​ ವಿಪತ್ತನ್ನು ಮುಂಗಾರು ಪ್ರವೇಶದ ಒಳಗೇ ತೊಡೆದು ಹಾಕಲು ಇಚ್ಛಿಸುತ್ತೇವೆ. ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.
ರಾಜ್ಯದಲ್ಲಿ ಕರೊನಾ ಪ್ರಸರಣವನ್ನು ನಾವು ನಿಯಂತ್ರಣಕ್ಕೆ ತಂದಿದ್ದೇವೆ. ಹಾಗಾಗಿ ಇನ್ನು ಲಾಕ್​ಡೌನ್​ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಯುಎಸ್​ ಔಷಧ ತಯಾರಿಕಾ ಸಂಸ್ಥೆಯಿಂದ ಗುಡ್​ನ್ಯೂಸ್​: ಕೊವಿಡ್​ ಲಸಿಕೆ ಮೊದಲ ಪ್ರಯೋಗದಲ್ಲಿ ಪಾಸ್​ !
ನ್​ ಝೋನ್​​ಗಳನ್ನು ಗ್ರೀನ್​ ಝೋನ್​ಗಳನ್ನಾಗಿಯೇ ಇಟ್ಟುಕೊಳ್ಳುವುದೇ ಒಂದು ಸವಾಲಾಗಿದೆ. ಆದರೂ ಅಲ್ಲಿ ಸ್ವಲ್ಪ ಸಡಿಲಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಈಗಾಗಲೇ 50,000ಕೈಗಾರಿಕೆಗಳ ಮರು ಪ್ರಾರಂಭಕ್ಕೆ ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದ್ದೇವೆ. ಆದರೆ ಜಾಸ್ತಿ ಸಡಿಲಿಕೆ ಸದ್ಯಕ್ಕೆ ಸಾಧ್ಯವೇ ಇಲ್ಲ.
ನನಗೆ ಗೊತ್ತು ಲಾಕ್​ಡೌನ್ ಸಡಿಲ ಮಾಡದೆ ಇದ್ದರೆ ನಾನು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅಮೆರಿಕ, ಯುರೋಪ್​ ದೇಶಗಳಲ್ಲಿ ಲಾಕ್​ಡೌನ್ ಸಡಿಲಿಕೆಯಿಂದ ಏನಾಯಿತು? ಕೊವಿಡ್​ ಪ್ರಮಾಣ ಎಷ್ಟು ಹೆಚ್ಚಾಯಿತು ಎಂದು ನಾವು ನೋಡಿದ್ದೇವೆ. ಹಾಗಾಗಿ ಸದ್ಯಕ್ಕೆ ನಿರ್ಬಂಧಗಳ ಸಂಪೂರ್ಣ ತೆರವು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ ವಲಸೆ ಕಾರ್ಮಿಕರು ದಯವಿಟ್ಟು ನಡೆಯುವುದನ್ನು ಬಿಡಿ ಎಂದೂ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಭಾರತದ ಉಗ್ರ ಲಂಡನ್​ನಲ್ಲಿ ಸೇಫ್​: ಹಸ್ತಾಂತರ ಕೋರಿದ್ದ ಭಾರತದ ಮನವಿ ತಿರಸ್ಕೃತ!
ಕೇಂದ್ರದಿಂದ ಲಾಕ್​ಡೌನ್​ ವಿಸ್ತರಣಾ ಅವಧಿ ಪ್ರಕಟಗೊಳ್ಳುವ ಮೊದಲೇ ಮಹಾರಾಷ್ಟ್ರ ಮೇ 31ರವರೆಗೆ ಲಾಕ್​ಡೌನ್ ಮುಂದುವರಿಸಿ ಆದೇಶ ನೀಡಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 4 =
Remember me
