ಮುಂಬೈ:ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಅವರನ್ನು ಶಿವಸೇನಾ ಮುಖವಾಣಿ ಸಾಮ್ನಾ ಗ್ರೂಪ್​ನ ಸಂಪಾದಕಿ ಆಗಿ ನೇಮಿಸಲಾಗಿದೆ.
ಸಾಮ್ನಾ ಗ್ರೂಪ್​ ಪ್ರಬೋಧನ್​ ಪ್ರಕಾಶನ್​ ಸಂಸ್ಥೆಯಿಂದ ನಡೆಯುತ್ತಿದೆ. ಈ ಸಂಸ್ಥೆಯ ಅಡಿಯಲ್ಲಿ ಸಾಮ್ನಾ(ಮರಾಠಿ ಭಾಷೆ) ಮತ್ತು ದೂಪಹರ್​ ಕಾ ಸಾಮ್ನಾ(ಹಿಂದಿ ಭಾಷೆ) ಎಂಬ ದಿನಪತ್ರಿಕೆ ಪ್ರಕಟಗೊಳ್ಳುತ್ತಿವೆ. ಸಾಮ್ನಾ ಗ್ರೂಪ್​ ಅನ್ನು ಶಿವಸೇನಾ ಪಕ್ಷದ ಪಿತಾಮಹ ಬಾಳಾಸಾಹೇಬ್​ ಠಾಕ್ರೆ ಅವರು ಸ್ಥಾಪಿಸಿದ್ದರಿಂದ ಶಿವಸೇನೆಯ ಮುಖವಾಣಿಯಂತಲೇ ಇದು ಪ್ರಸಿದ್ಧಿಯಾಗಿದೆ.
ಭಾನುವಾರ ಪ್ರಕಟಗೊಂಡ ನ್ಯೂಸ್​ಪೇಪರ್​ನಲ್ಲಿ ಸಾಮ್ನಾ ಗ್ರೂಪ್​ ಪ್ರಕಾಶಕರಾದ ರಾಜೇಂದ್ರ ಎಂ. ಭಾಗವತ್​ ಮತ್ತು ಟ್ರಸ್ಟ್​ನ ಇತರೆ ಸದಸ್ಯರ ಹೆಸರುಗಳೊಂದಿಗೆ ಸಂಪಾದಕರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಈ ಬಗೆಗಿನ ಮಾಹಿತಿಗಾಗಿ ಪಕ್ಷದ ನಾಯಕರನ್ನು ಸಂಪರ್ಕಿಸಿದಾಗ ಬಹಳ ಜವಾಬ್ದಾರಿಯುತ ಸ್ಥಾನಕ್ಕೆ ಅವರನ್ನು ನೇಮಿಸಲಾಗಿದೆ. ಅದನ್ನು ಅವರು ಶ್ರದ್ಧೆಯಿಂದ ನಿರ್ವಹಿಸುತ್ತಾರೆ ಎಂದಷ್ಟೇ ಹೇಳಿದರು. ಆದರೆ, ವಿಸ್ತಾರವಾಗಿ ಮಾತನಾಡಲು ನಿರಾಕರಿಸಿದರು. ಶಿವಸೇನಾ ಕುಟುಂಬದ ಆಪ್ತರಲ್ಲಿ ಒಬ್ಬರಾದ ಸಂಸದ ಸಂಜಯ್​ ರಾವತ್​ ಸಾಮ್ನಾ ಗ್ರೂಪ್​ನ ಕಾರ್ಯನಿರ್ವಾಹಕ ಸಂಪಾದಕರಾಗಿ ಮುಂದುವರಿಯಲಿದ್ದಾರೆ.
ಅಂದಹಾಗೆ ಬಹು ಆವೃತ್ತಿಯ ಮರಾಠಿ ಸಾಮ್ನಾ ಪತ್ರಿಕೆಯನ್ನು 1983ರ ಜನವರಿ 23ರಂದು ದಿವಂಗತ ಬಾಳಾ ಠಾಕ್ರೆ ಅವರು ಸ್ಥಾಪಿಸಿದರು. ಮೊದಲ ಸಂಪಾದಕರೂ ಆಗಿದ್ದರು. ಹಿಂದಿ ಆವೃತ್ತಿ ದೂಪಹರ್​ ಕಾ ಸಾಮ್ನಾ ಪತ್ರಿಕೆಯನ್ನು 1993ರ ಫೆ. 23ರಂದು ಸ್ಥಾಪಿಸಲಾಯಿತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 1 =
Remember me
