ಚೆನ್ನೈ:ನಟ ವಿಜಯ್​ ಅವರು ವಿಜಯ್ ಮಕ್ಕಳ್ ಇಯಕ್ಕಂ ಸಂಘಟನೆ ವತಿಯಿಂದ ನಿನ್ನೆ (ಜೂ. 17) ಚೆನ್ನೈನ ನೀಲಂಕರೈನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಜಯ್​ ಆಡಿದ ಮಾತುಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದು, ವಿಜಯ್​ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಜಯ್​ ರಾಜಕೀಯ ಪ್ರವೇಶಕ್ಕೆ ಈಗಾಗಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬೆಂಬಲ ಸೂಚಿಸಿದ್ದಾರೆ. ಇದೀಗ ತಮಿಳುನಾಡು ಸಿಎಂ ಸ್ಟಾಲಿನ್​ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವಿಜಯ್ ಅವರು ಮಾತನಾಡಿದ ಕಾರ್ಯಕ್ರಮವನ್ನು ನಾನು ಈವರೆಗೂ ನೋಡಿಲ್ಲ. ಮತ ಚಲಾವಣೆ ಮಾಡುವಾಗ ಹಣ ಸ್ವೀಕರಿಸಬೇಡಿ ಎಂದು ವಿಜಯ್ ಅವರು ಹೇಳಿರುವುದು ಒಳ್ಳೆಯ ಮಾತು. ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು. ಇಂಥವರ ಬರಬೇಕು ಮತ್ತು ಇಂಥವರು ಬರಬಾರದು ಎಂದು ಹೇಳಲು ಯಾರಿಗೂ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.
ಉದಯನಿಧಿ ಹೇಳಿಕೆ ಈ ರೀತಿಯಾದರೆ, ಅಣ್ಣಾಮಲೈ ಅವರು ಡಿಎಂಕೆ ಪಕ್ಷದ ವಿರುದ್ಧವೇ ಮಾತನಾಡಿದ್ದಾರೆ. ವಿಜಯ್​ರಂತಹ ಆತ್ಮಸಾಕ್ಷಿಯುಳ್ಳ ವ್ಯಕ್ತಿಯನ್ನು ನಾನು ರಾಜಕೀಯಕ್ಕೆ ಸ್ವಾಗತಿಸುತ್ತೇನೆ. ಅವರು ಬಹಳ ಮುಖ್ಯ ವ್ಯಕ್ತಿಯಾಗಿದ್ದಾರೆ ಮತ್ತು ಜನರು ಅವರನ್ನು ಅನುಸರಿಸುತ್ತಾರೆ. ರಾಜ್ಯ ರಾಜಕೀಯದಲ್ಲಿ ಅವರ ಧ್ವನಿ ತುಂಬಾ ಮುಖ್ಯವಾಗಿದೆ. ಆದರೆ, ತಮಿಳುನಾಡಿನಂತಹ ರಾಜ್ಯಗಳಲ್ಲಿ ವಿಜಯ್​ರಂತಹವರಿಗೆ ರಾಜಕೀಯ ಪ್ರವೇಶಿಸಲು ದೊಡ್ಡ ಶಕ್ತಿಗಳು ಅವಕಾಶ ನೀಡುವುದಿಲ್ಲ. ಅವರಿಗೆ ಆಸಕ್ತಿ ಇದ್ದರೆ ಖಂಡಿತ ರಾಜಕೀಯ ಸೇರಬೇಕು. ಅವರಂತಹವರನ್ನು ರಾಜಕೀಯಕ್ಕೆ ಬರದಂತೆ ತಡೆಯಲು ಡಿಎಂಕೆಯಂತಹ ಪಕ್ಷಗಳು ತಮ್ಮೆಲ್ಲ ಪ್ರಯತ್ನ ನಡೆಸಲಿವೆ ಎಂದು ಅಣ್ಣಾಮಲೈ ಹೇಳಿದರು.
ಇದನ್ನೂ ಓದಿ:ಅಧಿಕ ಉಷ್ಣಾಂಶಕ್ಕೆ ಉತ್ತರ ಪ್ರದೇಶ ತತ್ತರ: 72 ಗಂಟೆಗಳಲ್ಲಿ 54 ಸಾವು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ನಟ ವಿಜಯ್ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ರಾಜಕೀಯದ ವಿಷಯ ಬಗ್ಗೆ ಮಾತನಾಡಿದರು. ಲಂಚ ಪಡೆದು ಮತ ಚಲಾಯಿಸದಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ನೀವು ನಾಳಿನ ಮತದಾರರು. ನೀವು ಉತ್ತಮ ನಾಯಕರನ್ನು ಆಯ್ಕೆ ಮಾಡಲಿದ್ದೀರಿ. ನಾವು ನಮ್ಮ ಬೆರಳಿನಿಂದ ಏಕೆ ಮತ ಚಲಾಯಿಸುತ್ತೇವೆ? ಹಾಗೇ ನಾವು ಮತಕ್ಕಾಗಿ ಹಣವನ್ನು ಸ್ವೀಕರಿಸುವಾಗ ಅದೇ ಬೆರಳಿನಿಂದ ನಮ್ಮ ಕಣ್ಣುಗಳನ್ನು ಚುಚ್ಚುಕೊಳ್ಳುತ್ತೇವೆ. ಮತಕ್ಕಾಗಿ ಲಂಚ ಪಡೆಯಬೇಡಿ ಎಂದು ನಿಮ್ಮ ಪೋಷಕರಿಗೆ ಹೇಳಿ. ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಪೂರ್ಣತೆ ಬರುತ್ತದೆ ಎಂದು ವಿಜಯ್​ ಹೇಳಿದರು.
ಚೆನ್ನೈನ ನೀಲಂಕರೈನಲ್ಲಿರುವ ಖಾಸಗಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಆಡಿದ ಮಾತುಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ವಿಜಯ್​ ರಾಜಕೀಯಕ್ಕೆ ಬರುವುದು ಖಚಿತ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ವಿಜಯ್​ ಖಚಿತಪಡಿಸಿಲ್ಲ. ಅವರು ರಾಜಕೀಯಕ್ಕೆ ಬರುತ್ತಾರೋ? ಇಲ್ಲವೋ? ಮುಂದಿನ ದಿನಗಳಲ್ಲಿ ತಿಳಿಯಲಿದೆ.(ಏಜೆನ್ಸೀಸ್​)
ಪೊಲೀಸ್​ ಎದುರೇ ಹಲ್ಲೆ ಮಾಡಲು ಮುಂದಾದ ವಿದ್ಯಾರ್ಥಿಗಳು! ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಗೂಂಡಾಗಿರಿ…

ಮಹಾರಾಷ್ಟ್ರ ವಿದ್ಯಾರ್ಥಿಯ ಕನ್ನಡ ಟಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:18 − 16 =
Remember me
