ನವದೆಹಲಿ:ಶೇ. 15 ವೇತನ ಪರಿಷ್ಕರಣೆಗೆ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಯುನೈಟೆಡ್ ಫೋರಂ ಬ್ಯಾಂಕ್ ಯೂನಿಯನ್ಸ್ (ಯುಎಫ್​ಬಿಯು) ಕರೆ ನೀಡಿದ್ದ ಮಾ.11ರಿಂದ ಮೂರು ದಿನಗಳ ಮುಷ್ಕರವನ್ನು ಹಿಂಪಡೆದಿದೆ.
ಐಬಿಎ ಜತೆ ಶನಿವಾರ ನಡೆದ ಮಾತುಕತೆಯಲ್ಲಿ ಶೇ.15 ವೇತನ ಹೆಚ್ಚಳ ಸೇರಿ ಇತರ ಬೇಡಿಕೆಗಳ ಈಡೇರಿಕೆ ಕುರಿತೂ ಮಾತುಕತೆ ನಡೆದಿದೆ. ಹೀಗಾಗಿ ಮುಷ್ಕರವನ್ನು ಹಿಂಪಡೆಯುತ್ತಿದ್ದೇವೆ ಎಂದು ಯುನೈಟೆಡ್ ಫೋರಂ ಬ್ಯಾಂಕ್ ಯೂನಿಯನ್ಸ್ ಹೇಳಿದೆ. ಈ ಹಿಂದೆ ಶೇ.12.5 ವೇತನ ಹೆಚ್ಚಳ ನಿರ್ಧಾರಕ್ಕೆ ದೃಢವಾಗಿದ್ದ ಐಬಿಎ ಹಲವು ಸುತ್ತಿನ ಮಾತುಕತೆ ಬಳಿಕ ನೌಕರರ ಬೇಡಿಕೆಗೆ ಮಣಿದಿದೆ.
ಮಾ11ರಿಂದ ಮಾ.13ರವರೆಗೆ ಮುಷ್ಕರ ನಡೆಸಲು ಬ್ಯಾಂಕ್ ಸಿಬ್ಬಂದಿ ನಿರ್ಧರಿಸಿದ್ದರು. ಇದರಿಂದಾಗಿ ಹೋಳಿ, ಭಾನುವಾರ ಮತ್ತು ಎರಡನೇ ಶನಿವಾರ ಸೇರಿ ಸತತ 6 ದಿನಗಳ ಕಾಲ ಬ್ಯಾಂಕ್​ಗಳು ಬಾಗಿಲು ಮುಚ್ಚಬೇಕಾಗಿತ್ತು. ಮುಷ್ಕರ ಹಿಂಪಡೆಯುವ ನಿರ್ಧಾರದಿಂದಾಗಿ ಗ್ರಾಹಕರಿಗೂ ತುಸು ನಿರಾಳತೆ ಸಿಕ್ಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
