ಇಂಫಾಲ್​:ಏಲಿಯನ್‌ ಮತ್ತು ಹಾರುವ ತಟ್ಟೆಗಳ ಬಗ್ಗೆ ದಶಕಗಳಿಂದಲೂ ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವರು ಇವೆರಡನ್ನೂ ತಾವು ಕಂಡಿರುವುದಾಗಿ ಹೇಳಿದರೆ, ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ ಇನ್ನು ಕೆಲವರು. ಆದರೂ ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್​ಒ (ಯೂನಿಫೈಡ್​ ಫ್ಲೈಯಿಂಗ್​ ಆಬ್ಜೆಕ್ಟ್​) ಎಂದು ಕರೆಯಲಾಗುತ್ತದೆ.
ಈ ಯುಎಫ್​ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ಇದರ ಬಗ್ಗೆ ಹೆಚ್ಚು ಮಾತುಗಳು ಕೇಳಿಬರುತ್ತಿರುತ್ತವೆ. ಆದರೆ ಈಗ ಭಾರತದಲ್ಲೂ ಇಂಥದ್ದೊಂದು ಮಾತು ಕೇಳಿಬಂದಿದೆ. ಮಣಿಪುರ ರಾಜಧಾನಿ ಇಂಫಾಲ್​ನ ವಿಮಾನ ನಿಲ್ದಾಣದ ಬಳಿ ಭಾನುವಾರ ಯುಎಫ್​ಒ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಯುಎಫ್​ಒ ಪತ್ತೆಯಾದ ಬೆನಲ್ಲೇ ಎರಡು ರಫೇಲ್​ ಜೆಟ್​ಗಳನ್ನು ಹಸಿಮಾರಾ ವಾಯುನೆಲೆಯಿಂದ ಹಾರಿಸಲಾಯಿತು. ಆದರೆ, ಏನನ್ನೂ ಗುರುತಿಸಲಾಗಿಲ್ಲ ಎಂದು ಸೇನೆಯ ಉನ್ನತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.
ಯುಎಫ್​ಒ ಹುಡುಕಿ ಹೊರಟ ಮೊದಲ ವಿಮಾನವು ತನ್ನ ನೆಲೆಗೆ ಮರಳಿತು ಮತ್ತು ಎರಡನೇ ಬಾರಿ ಪರಿಶೀಲಿಸುವ ಸಲುವಾಗಿ ಇನ್ನೊಂದು ವಿಮಾನವನ್ನು ಯುಎಫ್​ಒ ಕಾಣಿಸಿಕೊಂಡ ಪ್ರದೇಶದ ಕಡೆಗೆ ಕಳುಹಿಸಲಾಯಿತು. ಆದರೆ, ಹತ್ತಿರದ ಪ್ರದೇಶಗಳಲ್ಲಿ ಏನನ್ನೂ ಗುರುತಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ, ಭಾರತೀಯ ವಾಯುಪಡೆಯ ಪೂರ್ವ ಕಮಾಂಡ್, ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಇದೀಗ ಸಕ್ರಿಯಗೊಳಿಸಿರುವುದಾಗಿ ಹೇಳಿದೆ.
ಈ ಬಗ್ಗೆ ಪೂರ್ವ ಕಮಾಂಡ್​ ತನ್ನ ಎಕ್ಸ್​ ಖಾತೆಯಲ್ಲಿ ಪೊಸ್ಟ್​ ಮಾಡಿದ್ದು, ಇಂಫಾಲ್​​ ವಿಮಾನ ನಿಲ್ದಾಣದ ಬಳಿ ಕಂಡುಬಂದು ದೃಶ್ಯ ರೂಪದ ಬಳಿಕ ಭಾರತೀಯ ವಾಯು ರಕ್ಷಣಾ ಪಡೆ ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನ ಆ್ಯಕ್ಟಿವೇಟ್​ ಮಾಡಿದೆ. ಪರಿಶೀಲನೆ ನಡೆಸಿದ ಬಳಿಕ ಯಾವುದೇ ಸಾಧನ ಕಂಡುಬಂದಿಲ್ಲ ಎಂದು ಹೇಳಿದೆ. ಯುಎಫ್​ಒ ಬರೀ ಕಣ್ಣುಗಳಿಗೆ ಕಾಣಿಸಿಕೊಂಡಿತು. ವಿಮಾನ ನಿಲ್ದಾಣದ ಪಶ್ಚಿಮಕ್ಕೆ ಸಂಜೆ 4 ಗಂಟೆಯವರೆಗೂ ಚಲಿಸುತ್ತಿತ್ತು ಎಂದು ಸಿಐಎಸ್​ಎಫ್​ ತಿಳಿಸಿದೆ.
ಯುಎಫ್​ಒ ಕಾಣಿಸಿಕೊಂಡ ಸುದ್ದಿ ಹರಡುತ್ತಿದ್ದಂತೆ ಇಂಫಾಲ್​ನ ಬಿರ್​ ಟಿಕೇಂದ್ರಜಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ವಿಮಾನ ನಿಲ್ದಾಣ ಮೇಲೆಯೇ ಕಾಣಿಸಿಕೊಂಡಿದ್ದರಿಂದ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಯಿತು.
ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಒಳಗೊಂಡಂತೆ ಕೆಲ ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. ಇಂಡಿಗೂ ವಿಮಾನವನ್ನು 25 ನಿಮಿಷಗಳ ನಂತರ ಗುವಾಹಟಿಗೆ ತಿರುಗಿಸಲಾಯಿತು. ಸುಮಾರು ಮೂರು ಗಂಟೆಗಳ ನಂತರ ಕ್ಲಿಯರೆನ್ಸ್ ಪಡೆದ ಬಳಿಕ ಇಂಫಾಲ್ ವಿಮಾನ ನಿಲ್ದಾಣದಿಂದ ವಿಮಾನಗಳು ಹೊರಟವು.(ಏಜೆನ್ಸೀಸ್​)
ಭಾರತದಲ್ಲೂ UFO ಪತ್ತೆ!? ಮಲಯಾಳಂ ನಟಿ ಹಂಚಿಕೊಂಡ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​​

ಏಲಿಯನ್​ನಿಂದ ಗರ್ಭಿಣಿಯಾದ ಮಹಿಳೆ! ಯುಎಸ್​ ರಕ್ಷಣಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಮೂರನೇ ವಿಶ್ವಯುದ್ಧಕ್ಕೆ ಏಲಿಯನ್​ಗಳ ತಯಾರಿ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುಎಸ್​ ಮಾಜಿ ಸೇನಾಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + four =
Remember me
