ಬೆಂಗಳೂರು:ಬೆಳಗಿನ ತರಗತಿ ಮೂಲಕ ಒಂದು ಪದವಿ, ಸಂಜೆ ಕಾಲೇಜಿನ ಮೂಲಕ ಮತ್ತೊಂದು ಪದವಿಯನ್ನು ಏಕಕಾಲದಲ್ಲಿ ಪಡೆಯುವುದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಾಧ್ಯವಾಗಲಿದೆ.
ಪದವಿ ಮಾತ್ರವಲ್ಲದೆ, ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಧ್ಯಕ್ಷ ಜಗದೀಶ ಕುಮಾರ್ ತಿಳಿಸಿದ್ದಾರೆ. ಯುಜಿಸಿ ಈ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸಿದ್ದು, ಒಂದೆರಡು ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗಲಿದೆ ಎಂದು ಮಂಗಳವಾರ ನಡೆಸಿದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಒಂದೇ ವಿವಿಯಿಂದ ಅಥವಾ ಬೇರೆ ಬೇರ ವಿಶ್ವವಿದ್ಯಾಲಯದಿಂದ ಈ ಪದವಿಗಳನ್ನು ಪಡೆದುಕೊಳ್ಳುವ ಅವಕಾಶ ಇರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಭೌತಿಕ ಸ್ವರೂಪದಲ್ಲಿ ಮಾತ್ರವಲ್ಲದೆ, ಆನ್​ಲೈನ್, ದೂರ ಶಿಕ್ಷಣದ ಅಥವಾ ಇವುಗಳ ಸಂಯೋಜಿತ ವಿಧಾನದಲ್ಲಿ ಎರಡು ಪದವಿಗಳ ವ್ಯಾಸಂಗ ನಡೆಸಬಹುದು ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − four =
Remember me
