ನವದೆಹಲಿ:ವಿದ್ಯಾರ್ಥಿಗಳಿಗೆ ನೇರವಾಗಿ ಮಾಹಿತಿಗಳು, ಮಾರ್ಗಸೂಚಿಗಳು ತಲುಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮುಂದಾಗಿದ್ದು, ವಾಟ್ಸಪ್ ಚಾನೆಲ್ ಅನ್ನು ಆರಂಭಿಸಿದೆ.
ಇದರಲ್ಲಿ ಯುಜಿಸಿಯು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳು, ಶಾಲಾ ಕಾಲೇಜುಗಳ ವಿಚಾರಗಳು, ಕೋರ್ಸ್‌ಗಳ ಸಹಿತ ಪ್ರಮುಖ ವಿಚಾರಗಳನ್ನು ತಿಳಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಯುಜಿಸಿ ಮುಖ್ಯಸ್ಥ ಎಂ. ಜಗದೀಶ್‌ಕುಮಾರ್, ಇದು ಮಹತ್ತರವಾದ ಬೆಳವಣಿಗೆಯಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳನ್ನು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳನ್ನು ಶೀಘ್ರವೇ ತಲುಪಲು ಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
SSA ಮೊದಲ ಹಂತದ ಫಲಿತಾಂಶ ಪ್ರಕಟ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್) ಯು ಇತ್ತೀಚೆಗಷ್ಟೇ ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟೆಂಟ್ (ಎಸ್‌ಎಸ್‌ಎ) ಹುದ್ದೆಗಳಿಗೆ ಮೊದಲ ಹಂತದ ನೇಮಕಾತಿ ಪರೀಕ್ಷೆ ನಡೆಸಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ಅಂತಿಮ ಫಲಿತಾಂಶ ಪ್ರಕಟಿಸಿದೆ. ಅಭ್ಯರ್ಥಿಗಳು ಮೊದಲು https://www.epfindia.gov.in/ ವೆಬ್‌ಸೈಟ್‌ಗೆ ಲಾಗಿನ್ ಮಾಡಬೇಕಿದ್ದು, ಅರ್ಜಿ ಸಂಖ್ಯೆ, ಜನ್ಮದಿನಾಂಕ ನಮೂದಿಸಿದ ಬಳಿಕ ಅಂಕಪಟ್ಟಿ ಡೌನ್‌ಲೋಡಿಂಗ್‌ಗೆ ಲಭ್ಯವಾಗಲಿದೆ. ಇತ್ತೀಚೆಷ್ಟೇ 2,674 ಎಸ್‌ಎಸ್‌ಎ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನೂ ಹೊರಡಿಸಲಾಗಿದ್ದು. ಆ.18ರಿಂದ 21ರವರೆಗೆ ಪರೀಕ್ಷೆ ನಡೆದಿತ್ತು. ತೇರ್ಗಡೆಯಾದ ಅಭ್ಯರ್ಥಿಗಳಿಗೆ ಶೀಘ್ರವೇ 2ನೇ ಹಂತದ ಪರೀಕ್ಷೆಗೆ ಕರೆ ಬರಲಿದೆ.
ರೈಲ್ವೇ ಪ್ಯಾಂಟ್ರಿಯಲ್ಲಿ ಆಹಾರದ ಮೇಲೆ ಇಲಿಗಳನ್ನು ನೋಡಿ ‘ಅಸಹ್ಯ’ಪಟ್ಟುಕೊಂಡ ಪ್ರಯಾಣಿಕರು; ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + three =
Remember me
