ನವದೆಹಲಿ:ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆ ಮಾಡಲು ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್​ಇಟಿ)ಯ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಮೇ ತಿಂಗಳ 2ರಿಂದ 17ರವರೆಗೆ ಪರೀಕ್ಷೆ ನಡೆಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ತಿಳಿಸಿದ್ದಾರೆ.
ಜೂನಿಯರ್​ ರಿಸರ್ಚ್​ ಫೆಲೋಶಿಪ್​(ಜೆಆರ್​ಎಫ್​) ಮತ್ತು ಸಹಾಯಕ ಪ್ರಾಧ್ಯಾಪಕ ಅರ್ಹತೆಗೆ ಪರೀಕ್ಷೆ ನಡೆಸಲಾಗುವುದು. ಮೇ2, 3, 4,4, 5, 6, 7, 10, 11, 12, 14, 17ರಂದು ಪರೀಕ್ಷೆ ನಡೆಯಲಿದೆ ಎಂದು ಸಚಿವರು ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಫೆಬ್ರವರಿ 2ರಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾರ್ಚ್​ 2ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಇರಲಿವೆ. ಮೊದಲನೇ ಪತ್ರಿಕೆಯಲ್ಲಿ 100 ಅಂಕಗಳಿಗೆ 50 ಪ್ರಶ್ನೆಗಳಿರಲಿದ್ದು, ಎರಡನೇ ಪತ್ರಿಕೆಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿರಲಿವೆ. ಎರಡೂ ಪತ್ರಿಕೆಗೆ ಒಟ್ಟಾರೆಯಾಗಿ 3 ಗಂಟೆಗಳ ಕಾಲಾವಕಾಶ (ಬ್ರೇಕ್​ ಇಲ್ಲದೆಯೇ) ಇರಲಿದೆ. ಇದು ಕಂಪ್ಯೂಟರ್​ ಆಧಾರಿತ ಟೆಸ್ಟ್ (ಸಿಬಿಟಿ) ಆಗಿರಲಿದೆ. (ಏಜೆನ್ಸೀಸ್​)
📢Announcement
National Testing Agency (@DG_NTA) will conduct next UGC-NET exam for Junior Research Fellowship & eligibility for Assistant Professor on 2, 3, 4, 5, 6, 7, 10, 11, 12, 14 & 17 May 2021.Read circular attached for more info! Good luck to all participants.#UGCNETpic.twitter.com/5j1zifvjD1
— Dr. Ramesh Pokhriyal Nishank (@DrRPNishank)February 2, 2021

ಏರೋ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದೆ ಅಮೆರಿಕದ B-1B ಲ್ಯಾನ್ಸರ್ ಹೆವಿ ಬಾಂಬರ್: ಭಾರತದಲ್ಲಿ ಇದರ ದರ್ಶನ ಇದೇ ಮೊದಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 6 =
Remember me
