ಲಂಡನ್​:ಬ್ರಿಟನ್​ನಲ್ಲಿ ನಡೆದ​ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇದೀಗ ಅಧಿಕೃತವಾಗಿ ಪ್ರಕಟವಾಗಿದ್ದು, ಕೀರ್ ಸ್ಟಾರ್ಮರ್ ಎದುರು ಪ್ರಧಾನಿ ರಿಷಿ ಸುನಕ್​ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಇಂದು ಬೆಳಗ್ಗೆ ಪ್ರತಿಪಕ್ಷ ಲೇಬರ್​ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸುನಕ್​ ಅವರ ಕನ್ಸರ್ವೇಟಿವ್​ ಪಾರ್ಟಿ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿತ್ತು. ಈಗ 410 ಸೀಟ್ ಪಡೆದುಕೊಂಡಿರುವ ಲೇಬರ್​ ಪಾರ್ಟಿ, ಸರ್ಕಾರ ರಚಿಸಲು ಬೇಕಿದ್ದ 326 ಸ್ಥಾನಗಳನ್ನು ಬಹುಮತದಿಂದ ಗೆದ್ದಿದೆ.
ಇದನ್ನೂ ಓದಿ:ಚನ್ನಪಟ್ಟಣ ಬೈ ಎಲೆಕ್ಷನ್​ಗೆ ಎನ್​ಡಿಎ ಅಭ್ಯರ್ಥಿ ಫೈನಲ್​?; ಹೊಸ ಟ್ವಿಸ್ಟ್​ ಕೊಟ್ಟ ಯೋಗೇಶ್ವರ್!
ಮೊದಲ ಹಂತದಲ್ಲೇ ಸೋಲಿನ ಸುಳಿವು ಸಿಗುತ್ತಿದ್ದಂತೆ ಆಘಾತಕ್ಕೊಳಗಾದ ರಿಷಿ ಸುನಕ್​, ತಮ್ಮ ಸೋಲು ಒಪ್ಪಿಕೊಂಡರು. ಈ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್​ ಪಾರ್ಟಿ ಗೆಲುವು ಸಾಧಿಸಿದೆ ಮತ್ತು ನಾನು ಕೀರ್ ಸ್ಟಾರ್ಮರ್​​ರನ್ನು ಗೆಲುವಿಗಾಗಿ ಅಭಿನಂದಿಸುತ್ತೇನೆ. ಇಂದು ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಹಸ್ತಾಂತರವಾಗುತ್ತದೆ ಹಾಗೂ ಎಲ್ಲ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದರು.
Thank you@RishiSunakfor your admirable leadership of the UK, and your active contribution to deepen the ties between India and the UK during your term in office. Best wishes to you and your family for the future.
— Narendra Modi (@narendramodi)July 5, 2024

ಇನ್ನು ಅಧಿಕಾರದ ಚುಕ್ಕಾಣಿ ಹಿಡಿದ ಲೇವರ್ ಪಕ್ಷದ ಕೀರ್ ಸ್ಟಾರ್‌ಮರ್​ಗೆ ಅಭಿನಂದನೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ರಿಷಿ ಸುನಕ್​ ಅವರಿಗೆ ಬೆನ್ನುತಟ್ಟಿದರು. “ಯುಕೆಯಲ್ಲಿ ನಿಮ್ಮ ನಾಯಕತ್ವ ಶ್ಲಾಘನೀಯ. ಧನ್ಯವಾದ ರಿಷಿ. ಭಾರತ ಮತ್ತು ಯುಕೆ ನಡುವಿನ ಸಂಬಂಧ ಗಟ್ಟಿಮಾಡುವಲ್ಲಿ ನಿಮ್ಮ ಆಡಳಿತ ಹೆಚ್ಚು ಕೊಡುಗೆ ನೀಡಿದೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು” ಎಂದು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್)​ ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
