ಉಡುಪಿ: ಈಸ್ಟ್ ಲೆಸ್ಟರ್‌ನಲ್ಲಿ  ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದ ಹಿಂದೂ ವಿರೋಧಿ ಗಲಭೆಯ ಬಗ್ಗೆ ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಉಡುಪಿ ಮೂಲದ ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಹಾಗೂ ಬ್ರಿಟಿಷ್ ರಾಜಕೀಯ ವಿಶ್ಲೇಷಕ ಕ್ರಿಸ್ ಬ್ಲಾಕ್‌ಬರ್ನ್  ಸಿದ್ಧಪಡಿಸಿದ ಸತ್ಯಶೋಧನಾ ವರದಿಯನ್ನು ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಗುರುವಾರ ಮಂಡಿಸಲಾಯಿತು.
ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್‌ಮನ್ ಅಧ್ಯಕ್ಷತೆ ವಹಿಸಿ, ಸತ್ಯಶೋಧನಾ ವರದಿ ನೀಡಿದ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ವರದಿಯಲ್ಲಿ ಏನಿದೆ?ಪೂರ್ವ ಲೆಸ್ಟರ್ ಭಾಗವು ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿದ್ದು, ಹಿಂದೂಗಳ ಮೇಲಿನ ದಾಳಿಯು ಪ್ರಾದೇಶಿಕ ಉದ್ವಿಗ್ನತೆಗೆ ಕಾರಣವಾಗಿದೆ.  ಅಶಾಂತಿಯ ಪರಿಣಾಮವಾಗಿ ಹಿಂದೂ ಕುಟುಂಬಗಳನ್ನು ಸ್ಥಳಾಂತರಗೊಳಿಸುವ ಮೂಲಕ ಪ್ರಾದೇಶಿಕ ಜನಾಂಗೀಯ ಶುದ್ಧೀಕರಣದ ಲಕ್ಷಣಗಳು ಕಂಡುಬಂದಿವೆ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ವಲಸಿಗ ಮುಸ್ಲಿಮರು ಹಿಂದೂ ಸಮುದಾಯದ ಮೇಲೆ ತಮ್ಮ ಗುರಿಯನ್ನು ತರ್ಕಬದ್ಧಗೊಳಿಸಲು ಹಿಂಸಾಚಾರವನ್ನು ಆತ್ಮರಕ್ಷಣೆಯ ಕೃತ್ಯ ಎಂಬುದಾಗಿ ತಪ್ಪು ಮಾಹಿತಿ ನೀಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ವರದಿಗಳು, ಸಾಕ್ಷಿಗಳ ಖಾತೆಗಳಿಂದ ದೃಢೀಕರಿಸಲ್ಪಟ್ಟ ಸಾಕ್ಷ್ಯಾಧಾರದ ಮೇಲೆ ವರದಿಯನ್ನು ಮಂಡಿಸಲಾಗಿದ್ದು, ಘಟನೆ ನಡೆಯುವ  ಕೆಲವು ದಿನಗಳ ಹಿಂದೆ ವ್ಯವಸ್ಥಿತವಾಗಿ ಹಿಂದೂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗಿತ್ತು. ಕೆಲವು ಮಾಧ್ಯಮ ಸಂಸ್ಥೆಗಳು ಅಶಾಂತಿ ಸೃಷ್ಟಿಸುವ ವರದಿಯ ವಿಶ್ಲೇಷಣೆಯ ಮೂಲಕ ಹಿಂದೂಫೋಬಿಯಾವನ್ನು ಬೆಂಬಲಿಸಿತ್ತು. ಬ್ರಿಟನ್‌ನಲ್ಲಿ ಹಿಂದುಗಳು ಅತೀ ವಿದ್ಯಾವಂತರಾಗಿದ್ದು, ಅಪರಾಧ ಪ್ರಕರಣಗಳಲ್ಲಿ ಶೇಕಡವಾರು ಪ್ರಮಾಣ ಶೂನ್ಯವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿ ನೀಡಿದ ಶಿಫಾರಸ್ಸುಗಳುಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಕಾರ ಮತ್ತು ನಾಗರಿಕ ಸಮಾಜ ಸಂಸ್ಥೆಗಳ ನಡುವಿನ ಸಹಯೋಗವನ್ನು ಹೆಚ್ಚಿಸುವ ಮೂಲಕ ಹಿಂದುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿನ ತಪ್ಪು ಮಾಹಿತಿಯನ್ನು ನಿವಾರಿಸುವ ಅಗತ್ಯವಿದೆ. ನಿಷ್ಪಕ್ಷಪಾತ ವರದಿಗಾರಿಕೆ  ಮತ್ತು ಪಾರದರ್ಶಕತೆಯನ್ನು ಉತ್ತೇಜಿಸಲು ನಿಬಂಧನೆಗಳನ್ನು ಜಾರಿಗೊಳಿಸಬೇಕು. ಪಕ್ಷಪಾತದ ಮಾಧ್ಯಮ ವರದಿಯನ್ನು ಮೊಟಕುಗೊಳಿಸಬೇಕು. ಬೆಳೆಯುತ್ತಿರುವ ಹಿಂದೂಫೋಬಿಯಾವನ್ನು ನಿಲ್ಲಿಸುವ ಅಗತ್ಯವಿದೆ. ದ್ವೇಷದ ಭಾಷಣ ಮತ್ತು ತಾರತಮ್ಯವನ್ನು ನಿಷೇಧಿಸುವ ಕಾನೂನು ಜಾರಿಗೊಳಿಸುವ ಮೂಲಕ ದುರ್ಬಲ ಅಲ್ಪಸಂಖ್ಯಾತರನ್ನು ಸುರಕ್ಷಿತಗೊಳಿಸಿ, ಸಂತ್ರಸ್ತರಿಗೆ ಕಾನೂನು ನೆರವು ನೀಡಬೇಕು ಎಂದು ಸತ್ಯಶೋಧನಾ ವರದಿ ಶಿಫಾಸರಸ್ಸು ಮಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
