ನವದೆಹಲಿ:ರಿಷಿ ಸುನಕ್ ಪ್ರಧಾನಿಯಾದ ಕ್ಷಣದಿಂದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ​ಗಳನ್ನು ಹರಿ ಬಿಡುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಭೂಪ ರಿಷಿ ಸುನಕ್​ ಮೂಲಕ ಕೊಹಿನೂರ್​ ವಜ್ರವನ್ನು ಭಾರತಕ್ಕೆ ಹೇಗೆ ತರಬೇಕು ಎಂದು ಮಾಸ್ಟರ್​ಪ್ಲಾನ್​ ಮಾಡಿದ್ದಾನೆ!
ಹರ್ಷ ಗೋಯೆಂಕಾ ಎನ್ನುವವರು ತಮ್ಮ ಗೆಳೆಯನ ನಾಲ್ಕು ಹಂತದ ಪ್ಲಾನ್​ ಒಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ರಿಷಿ ಸುನಕ್​ರನ್ನು ಭಾರತಕ್ಕೆ ಆಹ್ವಾನಿಸುವುದು. ತಮ್ಮ ಮಾವನ ಮನೆಗೆ ಹೋಗುವಾಗ ಅವರನ್ನು ಬೆಂಗಳೂರು ಟ್ರಾಫಿಕ್​ನಲ್ಲಿ ಕಿಡ್ನಾಪ್​ ಮಾಡುವುದು. ನಂತರ ಬ್ರಿಟನ್​ ಪ್ರಧಾನಿಯನ್ನೇ ಹೋಲುವ ಆಶೀಶ್ ನೆಹ್ರಾರನ್ನು ಸುನಕ್​ ಬದಲಾಗಿ ಕಳುಹಿಸಿ ಕೊಹಿನೂರ್ ಹಿಂತಿರುಗಿಸುವ ಬಿಲ್​ ಪಾಸ್ ಮಾಡಿಸುವುದು’ ಎಂದು ಟ್ವೀಟ್​ ಮಾಡಿದ್ದಾರೆ.
ಕೆಲವರು ರಿಷಿ ಸುನಕ್​ರನ್ನೇ ಹೋಲುವ ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಆಶಿಶ್ ನೆಹ್ರಾಗೆ ಅಭಿನಂದಿಸದ್ದಾರೆ. ಇನ್ನೂ ಕೆಲವರು ಭಾರತವನ್ನು ಆಳಿದ್ದ ಬ್ರಿಟೀಷರನ್ನು ಇಂದು ಭಾರತೀಯ ಆಳುತ್ತಿದ್ದಾನೆ ಎಂದು ಕಾಲೆಳೆದಿದ್ದಾರೆ.
ಇದೀಗ ಹರ್ಷ ಗೋಯೆಂಕಾ ಅವರ ಟ್ವೀಟ್​ ಭಾರಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರಂತೂ ‘ಸುನಕ್​ ಟ್ರಾಫಿಕ್​ನಲ್ಲಿ ಸಿಲುಕಿದ್ದಾಗಲೇ ನೆಹ್ರಾರನ್ನು ಕಳುಹಿಸಿ ಬಿಲ್ ಪಾಸ್​ ಮಾಡಿಸಬಹುದು’ ಎಂದಿದ್ದಾರೆ.
My friend’s idea to get back#Kohinoor:1. Invite#RishiSunakto India2. Kidnap him when he is stuck in Bangalore traffic to visit his in-laws3. Send instead Ashish Nehra as UK PM. No one will realise it.4. Nehra will be told to pass the bill to return Kohinoor💎 in 🇮🇳! 😀😀— Harsh Goenka (@hvgoenka)October 25, 2022
My friend’s idea to get back#Kohinoor:1. Invite#RishiSunakto India2. Kidnap him when he is stuck in Bangalore traffic to visit his in-laws3. Send instead Ashish Nehra as UK PM. No one will realise it.4. Nehra will be told to pass the bill to return Kohinoor💎 in 🇮🇳! 😀😀
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
