ನವದೆಹಲಿ:ಯುನೈಟೆಡ್​ ಕಿಂಗ್​ಡಮ್​​​ನಲ್ಲಿ ಇದ್ದ 15ನೇ ಶತಮಾನದ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಅಲ್ಲಿನ ಅಧಿಕಾರಿಗಳು ಹಿಂತಿರುಗಿಸಿದ್ದಾರೆ ಎಂದು ಸಾಂಸ್ಕೃತಿಕ ಸಚಿವ ಪ್ರಲ್ಹಾದ್​ ಸಿಂಗ್​ ಪಟೇಲ್​ ಅವರು ತಿಳಿಸಿದ್ದಾರೆ.
ತಮಿಳುನಾಡಿನ ದೇವಸ್ಥಾನವೊಂದರಿಂದ 1978ರಲ್ಲಿ ಒಟ್ಟು ಮೂರು ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಇವು 15 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದ್ದವು. ವಿಗ್ರಹಗಳನ್ನು ಕಳವು ಮಾಡಿ ಯುಕೆಗೆ ಸ್ಮಗ್ಲಿಂಗ್​ ಮಾಡಲಾಗಿತ್ತು. ಇದೀಗ ಯುಕೆ ಸರ್ಕಾರ ಆ ವಿಗ್ರಹಗಳನ್ನು ಮತ್ತು ಒಂದು ಸ್ತಂಭವನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದಿದ್ದಾರೆ. ಹಾಗೇ ವಿಗ್ರಹ ಹಸ್ತಾಂತರ ಮಾಡಲು ಲಂಡನ್​​ನ ಭಾರತೀಯ ಹೈಕಮಿಷನ್​ ಕೂಡ ತುಂಬ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:‘ಈಗಿದೆಲ್ಲ ಕಾಮನ್..ನಾವೂ ಕ್ಯಾಸಿನೋಕ್ಕೆ ಹೋಗಿದ್ವಿ, ಆದ್ರೆ…’ -ನಟ ದಿಗಂತ್​ ತಾಯಿ ಹೇಳಿದ್ದು ಹೀಗೆ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಿಂದ ಈಚೆಗೆ ಒಟ್ಟು 40 ಪ್ರಾಚೀನ ವಿಗ್ರಹಗಳನ್ನು ಸಂಗ್ರಹಿಸಿದೆ. ಇವೆಲ್ಲ ಈ ಹಿಂದೆ ಕಳವಾಗಿ, ಬೇರೆ ದೇಶಗಳಿಗೆ ಕಳ್ಳಸಾಗಣೆ ಆಗಿದ್ದವುಗಳು. ಸ್ವಾತಂತ್ರ್ಯಾನಂತರ 2013ರವರೆಗೆ ಬರೀ 13 ಕಲಾಕೃತಿಗಳು ಮತ್ತು ಪ್ರಾಚೀನವಸ್ತುಗಳನ್ನಷ್ಟೇ ಸಂಗ್ರಹಿಸಲಾಗಿತ್ತು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:‘ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ’
ಹಾಗೇ 20 ವರ್ಷಗಳ ಹಿಂದೆ ರಾಜಸ್ಥಾನದಿಂದ ಕಳವಾಗಿದ್ದ 9ನೇ ಶತಮಾನದ ಶಿವನ ವಿಗ್ರಹವನ್ನು ಆಗಸ್ಟ್​​ನಲ್ಲಿ ಲಂಡನ್​ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ.(ಏಜೆನ್ಸೀಸ್​)
ಬಂಧನದ ಭೀತಿ: 5 ವರ್ಷಗಳಲ್ಲಿ ಪಲಾಯನ ಮಾಡಿದ ‘ಶ್ರೀಮಂತ ಕಳ್ಳ’ರೆಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
