ಲಂಡನ್​:ಹೌಸ್ ಆಫ್ ಲಾರ್ಡ್ಸ್​ನ ಪ್ರತಿನಿಧಿಯಾಗುವುದಕ್ಕೆ ಪ್ರಯತ್ನಿಸುತ್ತಿದ್ದ ಖಲಿಸ್ತಾನ ಬೆಂಬಲಿಗನೊಬ್ಬನನ್ನು ತಡೆಯುವ ಮೂಲಕ ಬ್ರಿಟನ್ ಸರ್ಕಾರ ಭಾರತದೊಂದಿಗೆ ಸಂಭವಿಸಲಿದ್ದ ರಾಜತಾಂತ್ರಿಕ ಬಿಕ್ಕಟ್ಟೊಂದನ್ನು ದೂರ ಮಾಡಿಕೊಂಡಿದೆ.
ಬ್ರಿಟನ್​ನಲ್ಲಿರುವ ಸಿಖ್ ಫೆಡರೇಷನ್​ನ ಪ್ರಿನ್ಸಿಪಾಲ್ ಅಡ್ವಸೈರ್ ದಬಿಂದರ್​ಜಿತ್ ಸಿಂಗ್ ಸಿಧು ಅವರ ಹೆಸರನ್ನು ಹೌಸ್ ಆಫ್ ಲಾರ್ಡ್ಸ್​ಗೆ ಅಲ್ಲಿನ ಲೇಬರ್ ಪಾರ್ಟಿ ನಾಮನಿರ್ದೇಶನ ಮಾಡಿತ್ತು. ಹೌಸ್ ಆಫ್ ಲಾರ್ಡ್ಸ್​ನ ಅಪಾಯಿಂಟ್ ಕಮಿಷನ್​ ಸಿಧು ಹೆಸರನ್ನು ಕೈಬಿಟ್ಟಿತ್ತು. ಬ್ರಿಟನ್​ನಲ್ಲಿ 2019ರ ತನಕ ನಿಷೇಧಿಸಲ್ಪಟ್ಟಿದ್ದ ಇಂಟರ್​ನ್ಯಾಷನಲ್​ ಸಿಖ್ ಯೂತ್ ಫೆಡರೇಷನ್​ ಜತೆಗೆ ಸಿಧು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಈ ಸಂಘಟನೆ ಭಾರತದಲ್ಲಿ ಇಂದಿಗೂ ನಿಷೇಧಿಸಲ್ಪಟ್ಟಿದೆ.
ಇದನ್ನೂ ಓದಿ:ಬಾಲಿವುಡ್​ನಲ್ಲಿ ಶುರುವಾಯ್ತು ‘ದಿಯಾ’ ರಿಮೇಕ್ ಕೆಲಸ; ಜನವರಿಯಿಂದ ಶೂಟಿಂಗ್​ ಶುರು
ಸಿಧು ಯುಕೆ ನ್ಯಾಷನಲ್ ಆಡಿಟ್ ಆಫೀಸ್​ (ಭಾರತದ ಸಿಎಜಿ ಕಚೇರಿಗೆ ಸಮ)ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತ್ಯೇಕ ಸಿಖ್ ರಾಷ್ಟ್ರ ಸ್ಥಾಪನೆಯನ್ನು ಪ್ರತಿಪಾದಿಸುತ್ತ ಬಂದವರು. ಸಿಧು ಅವರ ಹೆಸರು ಕೊನೆಯ ಹಂತದ ತನಕವೂ ಪಟ್ಟಿಯಲ್ಲಿತ್ತು. ಆದರೆ, ಸಂಭಾವ್ಯ ರಾಜತಾಂತ್ರಿಕ ಬಿಕ್ಕಟ್ಟನ್ನು ಮುನ್ನಂದಾಜಿಸಿದ ಲೇಬರ್ ಪಾರ್ಟಿಯ ನಾಯಕತ್ವ ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿತು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಕೃಷಿ ಕಾನೂನು ಹೋರಾಟ: ಪ್ರಿಯಾಂಕಾ ಗಾಂಧಿ ಬಂಧನ, ರಾಷ್ಟ್ರಪತಿಯವರನ್ನು ಭೇಟಿಯಾದ ರಾಹುಲ್ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
