ಉಕ್ರೇನ್​ (ಪಶ್ಚಿಮ ಯುರೋಪ್​):ವಿಶ್ವದಾದ್ಯಂತ ಲಾಕ್​ಡೌನ್​ ಲಕ್ಷಾಂತರ ಮಂದಿಯ ಖುಷಿ, ಉದ್ಯೋಗ, ಕುಟುಂಬ ಎಲ್ಲವನ್ನೂ ಕಸಿದುಕೊಂಡಿದೆ, ಲಾಕ್​ಡೌನ್​ ಆರಂಭಕ್ಕೂ ಕಾರ್ಯನಿಮಿತ್ತ ತಮ್ಮ ಮನೆ ಬಿಟ್ಟು ಯಾವುದ್ಯಾವುದೋ ಊರು, ದೇಶಗಳಿಗೆ ಹೋಗಿದ್ದರೋ, ಅಲ್ಲಿಯೇ ಅನಿವಾರ್ಯವಾಗಿ ಉಳಿದುಕೊಳ್ಳುವ ಪರಿಸ್ಥಿತಿ ಸಹಸ್ರಾರು ಮಂದಿಯದ್ದಾಗಿದೆ.
ಇದು ಒಂದೆಡೆಯಾದರೆ, ಇಲ್ಲಿ ಹೇಳಹೊರಟಿರುವುದು ಮಾತ್ರ ವಿಭಿನ್ನ ಕಥೆಯೇ. ಇದು ಸಾವಿರಾರು ಶಿಶುಗಳು ತಮ್ಮ ತಾಯಿಯ ಮಡಿಲನ್ನು ಸೇರಲು ಕಾತರವಾಗಿವೆ.
ಹೌದು. ಇವೆಲ್ಲಾ ಬಾಡಿಗೆ ಶಿಶುಗಳು. ಅಂದರೆ ಮಹಿಳೆಯರು ಬಾಡಿಗೆ ತಾಯ್ತನದ ಮೂಲಕ ಹೆತ್ತ ಮಕ್ಕಳು ಇವು. ಯಾವುದೋ ಕಾರಣಕ್ಕೆ ಮಕ್ಕಳನ್ನು ಪಡೆಯಲು ಆಗದವರು ಅಥವಾ ಗರ್ಭ ಧರಿಸಲು ಇಚ್ಛೆ ಇಲ್ಲದವರು ಬೇರೆ ಹೆಣ್ಣಿನ ಮೂಲಕ ಮಗುವನ್ನು ಹೆರುವ ವಿಧಾನೇ ಬಾಡಿಗೆ ತಾಯ್ತನ. ಈ ರೀತಿ ತಾಯಿಯಾಗ ಬಯಸುವ ಹೆಣ್ಣಿನ ಅಂಡಾಣುವನ್ನು ತೆಗೆದು ಅದನ್ನು ಯಾವುದೋ ಗಂಡಿನ ವೀರ್ಯಾಣುವಿನ ಜತೆಗೂಡಿಸಿ ಅದನ್ನು ಬೇರೆ ಮಹಿಳೆಯ ಗರ್ಭದಲ್ಲಿ ಇಟ್ಟು ಮಗುವನ್ನು ಮಾಡಲಾಗುತ್ತದೆ.
ಇದನ್ನೂ ಓದಿ:ಕರೊನಾ ಪರೀಕ್ಷಾ ಸಾಧನಕ್ಕೆ ಸ್ವದೇಶಿ ಟಚ್​! ಚೀನಾಕ್ಕೆ ಸೆಡ್ಡು ಹೊಡೆದ ಕೇಂದ್ರ – ಮತ್ತೊಮ್ಮೆ ವಿಶ್ವದ ಕಣ್ಣು ಭಾರತದತ್ತ…!
ಭಾರತದಲ್ಲಿ ಇಂಥ ಮಗುವನ್ನು ಪಡೆಯಬೇಕೆಂದರೆ ಕಾನೂನು ಬಲು ಕಠಿಣವಾಗಿದೆ. ಆದರೆ ಉಕ್ರೇನ್​ ಸೇರಿದಂತೆ ಕೆಲವು ದೇಶಗಳಲ್ಲಿ ಯಾವುದಾದರೂ ಹೆಣ್ಣು ಈ ರೀತಿ ಮಗುವನ್ನು ಪಡೆಯಬಹುದಾಗಿದೆ. ಅದರಲ್ಲಿಯೂ ಉಕ್ರೇನ್​ ಬಾಡಿಗೆ ತಾಯ್ತನಕ್ಕೆ ತುಂಬಾ ಪ್ರಸಿದ್ಧಿ ಪಡೆದಿರುವ ದೇಶ. ಏಕೆಂದರೆ ಇಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಿಸಲಾಗುತ್ತದೆ.
ಇದೇ ಕಾರಣಕ್ಕೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಬಯಸುವವರು ಉಕ್ರೇನ್​ನತ್ತ ಮುಖಮಾಡುತ್ತಾರೆ. ಇದಾಗಲೇ ಬೇರೆ ಬೇರೆ ದೇಶಗಳಿಂದ ಸಹಸ್ರಾರು ಮಹಿಳೆಯರು ಈ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಗರ್ಭದಲ್ಲಿ ಮಗುವನ್ನು ಹೊತ್ತ ಮಹಿಳೆ ಆ ಮಗುವನ್ನು ಹೆತ್ತ ಬಳಿಕ ಆಕೆಯ ಕರ್ತವ್ಯ ಅಲ್ಲಿಗೇ ಮುಗಿಯುತ್ತದೆ. ಯಾರ ಗರ್ಭಧಾರಣೆಯನ್ನು ಮಾಡಿಸಿದ್ದಾರೋ ಆ ದಂಪತಿ ಅಥವಾ ಒಂಟಿ ಮಹಿಳೆ ಮಗುವನ್ನು ಆಸ್ಪತ್ರೆಯಿಂದ ಪಡೆಯಬೇಕು.
ಇದನ್ನೂ ಓದಿ:VIDEO: ‘ಮೋದಿಯನ್ನು ಕೊಲ್ಲುತ್ತೇನೆ’ ಎಂದ ಬಾಲಕ: ಮಕ್ಕಳಲ್ಲಿಯೂ ಬಿತ್ತಲು ಶುರುವಾಯಿತೇ ವಿಷಬೀಜ? ಬಿಜೆಪಿ ಟ್ವೀಟ್​
ಆದರೆ ಅಲ್ಲಿಯೇ ಬಂದಿರುವುದು ಸಂಕಷ್ಟ. ಈಗ ಅಂತಾರಾಷ್ಟ್ರೀಯ ಗಡಿಗಳೆಲ್ಲ ಮುಚ್ಚಿರುವುದರಿಂದ ಉಕ್ರೇನ್‌ನಲ್ಲಿ ಬಾಡಿಗೆ ತಾಯಂದಿರಿಗೆ ಜನಿಸಿದ ಮಕ್ಕಳು ತಮ್ಮ ಪಾಲಕರನ್ನು ಸೇರಲಾಗದೆ ಆಸ್ಪತ್ರೆಗಳಲ್ಲಿ ಅನಾಥ ಸ್ಥಿತಿಯಲ್ಲಿವೆ. ವಿಮಾನಗಳು ರದ್ದಾಗಿರುವುದರಿಂದ ಮಕ್ಕಳನ್ನು ಪಡೆಯಲು ಪೋಷಕರಿಗೆ ಬರಲಾಗುತ್ತಿಲ್ಲ. ಅತ್ತ ಮಕ್ಕಳನ್ನು ಹೆತ್ತವರೂ ತಮ್ಮ ಕೆಲಸ ಮುಗಿಸಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ಈಗ ಸಾವಿರಾರು ಕಂದಮ್ಮಗಳು ಅನಾಥವಾಗಿಬಿಟ್ಟಿವೆ. ಅಮೆರಿಕ, ಬ್ರಿಟನ್‌, ಸ್ಪೇನ್​ ಮತ್ತಿತರ ದೇಶಗಳ ಪಾಲಕರು ಉಕ್ರೇನ್‌ನ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯಲು ನೋಂದಣಿ ಮಾಡಿಸಿಕೊಂಡಿದವರಿದ್ದಾರೆ!
ಈ ಎಲ್ಲರಿಗೂ ಉಕ್ರೇನ್​ಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಲಕರಿಲ್ಲದೆ ಆಸ್ಪತ್ರೆಯಲ್ಲಿ ಅನಾಥ ಶಿಶುಗಳಾಗಿವೆ. ಕನಿಷ್ಠ ಬಾಡಿಗೆ ತಾಯಂದಿರಲ್ಲಿ ಮಗು ಪಡೆಯಲು ನೋಂದಣಿ ಮಾಡಿಸಿಕೊಂಡ ಪಾಲಕರನ್ನು ಕರೆಸಿಕೊಳ್ಳಲು ಅನುಮತಿ ನೀಡಬೇಕೆಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಲುಡ್ಮಿಲ ಡೆನಿಸೊವ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಇದು ಅಷ್ಟು ಸುಲಭದಲ್ಲಿ ಆಗುವ ಕಾರ್ಯವಲ್ಲ ಎನ್ನುವುದೂ ಅಷ್ಟೇ ಸತ್ಯ.
ಇದನ್ನೂ ಓದಿ:ಒಂದೇ ದಿನ 54 ಹೊಸ ಕರೊನಾ ಕೇಸ್; ಕರುನಾಡಿಗೆ ಕಂಟಕವಾದ ಮುಂಬೈ ರಿಟರ್ನ್ಡ್ ಮಂದಿ!
ಆದರೆ ಸದ್ಯಕ್ಕಂತೂ ಮಕ್ಕಳು ಅಮ್ಮನ ಮಡಿಲು ಸೇರಲು ಹಪಹಪಿಸುತ್ತಿವೆ!(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
