ನವದೆಹಲಿ:ಇಷ್ಟುದಿನ ಭಾರತದ ಬಗ್ಗೆ ಹಿಂದೊಂದು, ಮುಂದೊಂದು ಮಾತನಾಡುತ್ತಿದ್ದ ಯೂಕ್ರೇನ್​ ಇದೀಗ ಭಾರತದ ಮನವೊಲಿಕೆಗೆ ಮುಂದಾಗಿದೆ. ಯೂಕ್ರೇನ್‌ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ ನಾಲ್ಕು ದಿನಗಳ ವಿಶೇಷ ಭೇಟಿಗೆ ಆಗಮಿಸಿದ್ದು “ಭಾರತ ವಿಶ್ವಗುರು ವಿನ ಸ್ಥಾನ ಅಲಂಕರಿಸಿದೆ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಅವರು ಟ್ವೀಟ್​ ಕೂಡ ಮಾಡಿದ್ದು “ಹಲವು ಋಷಿಗಳು, ಸಂತರು ಮತ್ತು ಗುರುಗಳಿಗೆ ಜನ್ಮ ನೀಡಿದ ಭೂಮಿಗೆ ಭೇಟಿ ನೀಡಲು ಸಂತೋಷವಾಗಿದೆ. ಇಂದು ಭಾರತ ವಿಶ್ವಗುರು, ಜಾಗತಿಕ ಶಿಕ್ಷಕ ಮತ್ತು ತೀರ್ಪುಗಾರನಾಗಲು ಬಯಸಿದೆ. ನಮ್ಮ ವಿಷಯದಲ್ಲಿ, ನಮಗೆ ಸ್ಪಷ್ಟವಾದ ಚಿತ್ರಣ ಸಿಕ್ಕಿದೆ. ಮುಗ್ಧ ಬಲಿಪಶುವಿನ ವಿರುದ್ಧ ಆಕ್ರಮಣಕಾರಿ ರಷ್ಯಾ ನಿಂತಿದೆ. ನಿಜವಾದ ವಿಶ್ವಗುರುವಿಗೆ ಉಕ್ರೇನ್‌ಗೆ ಬೆಂಬಲ ನೀಡುವುದು ಮಾತ್ರ ಸರಿಯಾದ ಆಯ್ಕೆಯಾಗಿದೆ” ಎಂದು ಸೋಮವಾರ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Happy to visit 🇮🇳-the land that gave birth to many sages,saints&gurus. Today,#Indiawants to be the Vishwaguru,the global teacher and arbiter. In our case, we’ve got a very clear picture:aggressor against innocent victim.Supporting🇺🇦 is the only right choice for true Vishwaguru.— Emine Dzheppar (@EmineDzheppar)April 10, 2023
Happy to visit 🇮🇳-the land that gave birth to many sages,saints&gurus. Today,#Indiawants to be the Vishwaguru,the global teacher and arbiter. In our case, we’ve got a very clear picture:aggressor against innocent victim.Supporting🇺🇦 is the only right choice for true Vishwaguru.
ಯೂಕ್ರೇನ್​ನ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷ. ರಷ್ಯಾ- ಯೂಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಇದೇ ಮೊದಲು ಪೂರ್ವ ಯುರೋಪ್​ನ ರಾಷ್ಟ್ರದ ಪ್ರತಿನಿಧಿಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಎಮಿನಿ ಝಪರೋವಾ ಮೊದಲಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ವರ್ಮಾ ಅವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಭಾರತದ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ:ಯೂಕ್ರೇನ್​​ ಶಾಲೆಯ ಮೇಲೆ ರಷ್ಯಾದ ಡ್ರೋನ್ ದಾಳಿ; 3 ಮಂದಿ ಮೃತ್ಯು, ಏಳು ಮಂದಿ ಗಂಭೀರ
Pleased to have a meeting with Secretary (West) MFA@SanjayVermalFS🇺🇦🇮🇳 in New Delhi. Updated on#Ukraine’s efforts to fight#russianunprovoked aggression. Invited 🇮🇳 to join President Zelenskyy's#PeaceFormula&#GrainFromUkraineinitiative. Important to have#Indiaon board.pic.twitter.com/v8ere2Mwex— Emine Dzheppar (@EmineDzheppar)April 10, 2023
Pleased to have a meeting with Secretary (West) MFA@SanjayVermalFS🇺🇦🇮🇳 in New Delhi. Updated on#Ukraine’s efforts to fight#russianunprovoked aggression. Invited 🇮🇳 to join President Zelenskyy's#PeaceFormula&#GrainFromUkraineinitiative. Important to have#Indiaon board.pic.twitter.com/v8ere2Mwex
ಸಂಜಯ್​ ವರ್ಮಾ ಅವರೊಂದಿಗಿನ ಅವರ ಭೇಟಿಯ ಸಮಯದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಚರ್ಚಿಸಿದ್ದು ಯೂಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹಾಗೂ ಅವರಿಬ್ಬರ ಆಸಕ್ತಿಯ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಕಳೆದ ವರ್ಷ ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತನಾಡಿದರು.
ಇದನ್ನೂ ಓದಿ:‘ನಾಟು ನಾಟು’ ಶೂಟು ನಡೆದದ್ದು ಯುದ್ಧ ಪೀಡಿತ ಯೂಕ್ರೇನ್​ನಲ್ಲಿ..!
ಕಳೆದ ವರ್ಷ ಅಕ್ಟೋಬರ್ 4 ರಂದು ಝೆಲೆನ್ಸ್ಕಿಯೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮೋದಿ ಅವರು “ಯಾವುದೇ ಮಿಲಿಟರಿ ಪರಿಹಾರ” ಸಾಧ್ಯವಿಲ್ಲ. ಶಾಂತಿ ಪ್ರಯತ್ನಕ್ಕೆ ಕೊಡುಗೆ ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದರು. ಯೂಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಸ್ಪಷ್ಟವಾಗಿ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಭಾರತದ ಅಧಿಕೃತ ಹೇಳಿಕೆಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
