ನವದೆಹಲಿ:ಐವತ್ತಮೂರು ಜನರ ಸಾವು ಮತ್ತು 400ಕ್ಕೂ ಹೆಚ್ಚು ಜನ ಗಾಯಗೊಳ್ಳುವುದಕ್ಕೆ ಕಾರಣವಾಗಿರುವ ಈಶಾನ್ಯ ದೆಹಲಿ ಹಿಂಸಾಚಾರದ ಪಿತೂರಿಯ ಕಾರಣಕ್ಕೆ ದೆಹಲಿ ಪೊಲೀಸರು ತುಕ್ಡೇ ತುಕ್ಡೇ ಗ್ಯಾಂಗ್​ನ ಉಮರ್ ಖಾಲಿದ್​ ನನ್ನು ಬಂಧಿಸಿದ್ರೆ, ಆತನ ತಂದೆ ಸೈಯದ್​ ಖಾಸಿಂ ರಸೂಲ್ ಇಲ್ಯಾಸ್ ಸ್ಟ್ಯಾಂಡ್ ವಿತ್ ಉಮರ್ ಖಾಲಿದ್ ಅಭಿಯಾನ ಶುರುಹಚ್ಚಿಕೊಂಡಿದ್ದಾರೆ!
ಮಧ್ಯರಾತ್ರಿ 12.52ಕ್ಕೆ ಈ ಸಂಬಂಧ ಟ್ವೀಟ್ ಮಾಡಿರುವ ಸೈಯದ್ ಖಾಸಿಂ ರಸೂಲ್ ಇಲ್ಯಾಸ್, ನನ್ನ ಮಗ ಉಮರ್ ಖಾಲಿದ್​ನನ್ನು ದೆಹಲಿ ಪೊಲೀಸ್​ ವಿಶೇಷ ಘಟಕ ಯುಎಪಿಎ ಪ್ರಕಾರ ರಾತ್ರಿ 11 ಗಂಟೆಗೆ ಬಂಧಿಸಿದೆ. ಮಧ್ಯಾಹ್ನ 1 ಗಂಟೆಯಿಂದ ನಿರಂತರವಾಗಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತನನ್ನು ದೆಹಲಿ ಗಲಭೆ ಕೇಸ್​ ಬಲೆಗೆ ಕೆಡವಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇಲ್ಯಾಸ್ ವೆಲ್​ಫೇರ್ ಫಾರ್ಟಿ ಆಫ್ ಇಂಡಿಯಾದ ನ್ಯಾಷನಲ್ ಪ್ರೆಸಿಡೆಂಟ್​, ಆಲ್​ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಕಾರ್ಯಕಾರಿ ಸಮಿತಿ ಸದಸ್ಯ, ಅಫ್ಕರ್​ ಏ ಮಿಲ್ಲಿಯ ಸಂಪಾದಕ.
ಇದನ್ನೂ ಓದಿ:ಮೈ ನಡುಕ ಹುಟ್ಟಿಸುವ ಸುದ್ದಿ ಇದು- ದೆಹಲಿ ಹಿಂಸಾಚಾರದ ವೇಳೆ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಹತ್ಯೆ ಮಾಡುವ ಮುನ್ನ ದುಷ್ಕರ್ಮಿಗಳು ನಡೆಸಿದ್ದರು ನೀಚ ಕೃತ್ಯ
ನಿನ್ನೆಯಷ್ಟೇ ದೆಹಲಿ ಪೊಲೀಸರು ಸಲ್ಲಿಸಿದ ಪೂರಕ ಚಾರ್ಜ್​ಶೀಟ್​ನಲ್ಲಿ ಸಿಪಿಐ(ಎಂ) ಜನರಲ್ ಸೆಕ್ರೆಟರಿ ಸೀತಾರಾಂ ಯೆಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಮತ್ತು ಇತರರ ಹೆಸರನ್ನು ಉಲ್ಲೇಖಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹಣಕಾಸು ಮತ್ತು ಸೌಲಭ್ಯದ ನೆರವಿನೊಂದಿಗೆ ದೆಹಲಿ ಗಲಭೆ ಪ್ರಾಯೋಜಿತವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಸಂದರ್ಭದಲ್ಲೇ ಹಿಂಸಚಾರ ಎಸಗುವುದಕ್ಕೆ ತಾಹಿರ್ ಹುಸೇನ್ ಮತ್ತು ಉಮರ್ ಖಾಲಿದ್ ಸಂಚು ರೂಪಿಸಿದ್ದರು ಎಂಬ ಅಂಶವನ್ನು ದೆಹಲಿ ಪೊಲೀಸರು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)
My son Umar Khalid has been arrested tonight at 11:00 pm by Special Cell, Delhi Police under UAPA. Police was questioning him since 1:00 pm. He has been implicated in Delhi Riots.#StandWithUmarKhalid
— Ilyas SQR (@Dr_SQRIlyas)September 13, 2020

ತುಕ್ಡೇ ತುಕ್ಡೇ ಗ್ಯಾಂಗ್​ನ ಉಮರ್ ಖಾಲಿದ್ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + seven =
Remember me
