ನವದೆಹಲಿ:ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಲೆಕ್ಕಕ್ಕಿರದ ನೂರು ಕೋಟಿ ರೂ. ಪತ್ತೆಯಾಗಿದೆ. ಅಂದರೆ ನೂರು ಕೋಟಿಗೂ ಅಧಿಕ ಮೊತ್ತದ ವಹಿವಾಟು ಇಲ್ಲವೇ ಹೂಡಿಕೆ ಬೇನಾಮಿ ಆಗಿ ನಡೆದಿರುವುದು ಐಟಿ ದಾಳಿ ವೇಳೆ ಕಂಡುಬಂದಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್​ನ ಕೆಲವೆಡೆ ನ. 4ರಿಂದ ಈ ದಾಳಿ ನಡೆದಿದ್ದು, ಕಲ್ಲಿದ್ದಲು ಉದ್ಯಮ, ಸಾರಿಗೆ, ಸಾರ್ವಜನಿಕ ಗುತ್ತಿಗೆ ಕಾಮಗಾರಿ, ಕಬ್ಬಿಣದ ಗಣಿಗಾರಿಕೆ ಇತ್ಯಾದಿ ಕ್ಷೇತ್ರಕ್ಕೆ ಸೇರಿದ ಪ್ರಕರಣಗಳಲ್ಲಿ ಈ ಮೂತ್ತದ ಅಕ್ರಮ ಪತ್ತೆಯಾಗಿದೆ. ಇಬ್ಬರು ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಹಾಗೂ ಅವರ ಸಂಗಡಿಗರನ್ನು ಒಳಗೊಂಡಂತೆ ಈ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆ ವೇಳೆ ವಿವರಣೆ ಇರದೆ 2 ಕೋಟಿ ರೂ. ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಅಲ್ಲದೆ 16 ಬ್ಯಾಂಕ್​ ಲಾಕರ್​​ಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದುವರೆಗೆ ವಹಿವಾಟು/ಹೂಡಿಕೆ ಸೇರಿ 100 ಕೋಟಿಗೂ ಅಧಿಕ ಮೊತ್ತದ ಅಕ್ರಮ ಎಸಗಿರುವುದು ತಿಳಿದುಬಂದಿದೆ. ಕೋಲ್ಕತ, ಗುರುಗ್ರಾಂ, ಪಾಟ್ನಾ, ಜಾರ್ಖಂಡ್​ನ ರಾಂಚಿ, ಗೊಡ್ಡ, ಬರ್ಮೊ, ದಮ್ಕಾ, ಜಮ್​ಷೆಡ್​ಪುರ, ಚೈಬಾಸ ಸೇರಿ 50 ಅಧಿಕ ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ಮನೆಯಲ್ಲಿದ್ದ ವಿವಾಹಿತೆ, ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆ!; ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಆತನೇ ಆರೋಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
