ಕೋಳಿಕ್ಕೋಡ್(ಕೇರಳ):ವಿಧಿಯಾಟ ಎಷ್ಟು ಕ್ರೂರಿ ಎಂಬುದಕ್ಕೆ ನಟ ಚಿರಂಜೀವಿ ಸರ್ಜಾರ ಸಾವು ಉದಾಹರಣೆಯಾಗಿದೆ. ಕೆಲವೇ ತಿಂಗಳಲ್ಲಿ ಅಪ್ಪನಾಗುವ ನಿರೀಕ್ಷೆಯಲ್ಲಿದ್ದ ಸರ್ಜಾ, ಗರ್ಭಿಣಿ ಪತ್ನಿ ಮೇಘಾರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದೇ ರೀತಿಯ ಮತ್ತೊಂದು ಮನಕಲಕುವ ಘಟನೆ ಕೇರಳದಲ್ಲೂ ನಡೆದಿದೆ.
ದುಬೈನಲ್ಲಿದ್ದ ಪತಿಗೆ ಉಡುಗೊರೆ ರೂಪದಲ್ಲಿ ಹೆಣ್ಣು ಮಗುವನ್ನು ನೀಡುವ ತವಕದಲ್ಲಿದ್ದ ಮಹಿಳೆಗೆ ಪತಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಸಿದುಬಿದ್ದ ಘಟನೆ ಕೇರಳದ ಕೋಳಿಕ್ಕೋಡ್​ನಲ್ಲಿ ನಡೆದಿದೆ.ಇದನ್ನೂ ಓದಿ:ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿ, ಪ್ರಿಯಕರನ ಸಂಚಿನಿಂದ ಪತಿ ಜಸ್ಟ್​ ಮಿಸ್!​
ಕೇರಳ ಮೂಲದ 28 ವರ್ಷದ ಯುವಕ ನಿತೀನ್​ ಚಂದ್ರ ದುಬೈನಲ್ಲಿ ಕೆಲಸದಲ್ಲಿ ಇದ್ದರು. ನಿರ್ಮಾಣ ಕ್ಷೇತ್ರವೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆರು ವರ್ಷಗಳಿಂದ ದುಬೈನಲ್ಲಿ ವಾಸವಾಗಿದ್ದರು. ಇವರ ಪತ್ನಿ ಅಥಿರಾ ಎರಡು ವರ್ಷದ ಹಿಂದಷ್ಟೇ ದುಬೈಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಅವರನ್ನು ದುಬೈನಲ್ಲಿ ಯಾರೂ ನೋಡಿಕೊಳ್ಳುವವರು ಇಲ್ಲವೆಂದು ಭಾರತಕ್ಕೆ ಕಳುಹಿಸಲು ನಿತೀನ್​ ಮುಂದಾಗಿದ್ದರು. ಅಷ್ಟರಲ್ಲಾಗಲೇ ಕರೊನಾ ಲಾಕ್​ಡೌನ್​ ಘೋಷಣೆಯಾಗಿತ್ತು.
ಭಾರತಕ್ಕೆ ಕಳುಹಿಸಲು ಸಾಧ್ಯವಾಗದೇ ಹರಸಾಹಸ ಪಟ್ಟ ನಿತೀನ್​, ಕೊನೆಯ ಮಾರ್ಗವಾಗಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದ ಅವರು, ಪತ್ನಿಯನ್ನು ಭಾರತಕ್ಕೆ ಕಳುಹಿಸಿಕೊಡಲು ಹೇಗಾದರೂ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅವರು ಕೋರಿದ್ದರು. ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್​, ವಿಶೇಷ ವಿಮಾನದ ವ್ಯವಸ್ಥೆಗೆ ನಿರ್ದೇಶಿಸಿತ್ತು. ಬಳಿಕ ಭಾರತ ಸರ್ಕಾರ ಜಾರಿಗೆ ತಂದಿದ್ದ ವಂದೇ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗೀತಾ ಕೇರಳಕ್ಕೆ ವಾಪಸ್ ಬಂದಿದ್ದರು. ಆದರೆ, ನಿತೀನ್​ ಅವರಿಗೆ ಕೆಲಸದ ನಿಮಿತ್ತ ರಜೆ ಸಿಕ್ಕಿರಲಿಲ್ಲ.ಇದನ್ನೂ ಓದಿ:ಸರ್ಕಾರಿ ಶಾಲಾ ಶಿಕ್ಷಕನಾಗಿದ್ದ ಪತಿಯ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಶರಣಾದ ಪತ್ನಿ
ತವರಿಗೆ ಮರಳಿದ ಅಥಿರಾ ಸಿಸೇರಿಯನ್ ಮೂಲಕ ಕೋಳಿಕ್ಕೋಡ್​ ಆಸ್ಪತ್ರೆ​ಯಲ್ಲಿ ಇಂದು (ಮಂಗಳವಾರ) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದುಬೈನಲ್ಲಿ ಕೋವಿಡ್​- 19 ತಡೆಗಟ್ಟುವಿಕೆ ಮತ್ತು ರಕ್ತದಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ನಿತಿನ್ ನಿದ್ರೆಯಲ್ಲಿದ್ದಾಗ ಸೋಮವಾರ ಹೃದಯಾಘಾತವಾಗಿ ನಿಧನರಾಗಿದ್ದಾರೆ.
29 ವರ್ಷದ ನಿತೀನ್ ತನ್ನ ಮಗುವಿನ ಮುಖವನ್ನು ನೋಡದೇ ಇಹಲೋಕ ತ್ಯಜಿಸಿದ್ದರೆ, ಪತಿಗೆ ಮಗುವನ್ನು ಉಡುಗೊರೆಯಾಗಿ ನೀಡಲು ಕಾದಿದ್ದ ಪತ್ನಿಗೆ ಪತಿ ಸಾವಿನ ಸುದ್ದಿ ಸಿಡಿಲುಬಡಿದಂತಾಗಿದೆ. ಈ ಹೃದಯ ವಿದ್ರಾವಕ ಕತೆ ಕೇಳಿದರೆ ವಿಧಿ ನೀ ಎಷ್ಟು ಕ್ರೂರಿ ಎಂದೆನಿಸದೇ ಇರದು.(ಏಜೆನ್ಸೀಸ್​)
ಕಾನೂನಿನ ಮೊರೆ ಹೋಗಿ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಕಣ್ಮುಚ್ಚಿದ ಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + 5 =
Remember me
