ಪ್ರಯಾಗ್‌ರಾಜ್:7 ತಿಂಗಳ ಮಗುವಿನ ಹೊಟ್ಟೆಯಿಂದ 2 ಕೆಜಿ ತೂಕದ ಭ್ರೂಣವನ್ನು ವೈದ್ಯರು ಯಶಸ್ವಿಯಾಗಿ ತೆಗೆದು ಹಾಕಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಬಳಿ ನಡೆದಿದೆ.ಮಗು ಪ್ರತಾಪಗಢದ ಕುಂಡಾ ನಿವಾಸಿಯಾಗಿದ್ದು, ಮಗುವಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು. ಉದ್ವಿಗ್ನಗೊಂಡ ಆತನ ಪೋಷಕರು ನಗರದ ಅನೇಕ ವೈದ್ಯರನ್ನು ಭೇಟಿ ಮಾಡಿದ್ದರು. ಸಾವಿರಾರು ರೂ. ಖರ್ಚು ಮಾಡಿದ ಪಾಲಕರಿಗೆ, ಮಗುವಿಗೆ ಮೂತ್ರದಲ್ಲಿ ಸೋಂಕು ಇದೆ ಎಂದು ವೈದ್ಯರೊಬ್ಬರು ಹೇಳಿದ್ಧಾರೆ.ಇದನ್ನೂ ಓದಿ:ಅಮರನಾಥ ಯಾತ್ರೆ ಮುಗಿಸಿ ಮನೆಗೆ ಹೊರಟವರು ಸೇರಿದ್ದು ಮಸಣಕ್ಕೆ: ಇಬ್ಬರು ಮಹಿಳೆಯರು ಸೇರಿದಂತೆ 6 ಜನರು ಮೃತಸಮಾಧಾನವಾಗದಿದ್ದಾಗ ಪೋಷಕರು ಮೋತಿಲಾಲ್ ನೆಹರು ಸರ್ಕಾರಿ ವೈದ್ಯಕೀಯ ಕಾಲೇಜಿನ ಸರೋಜಿನಿ ನಾಯ್ಡು ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಮಗುವಿನ ಹೊಟ್ಟೆಯಲ್ಲಿ 2 ಕೆಜಿ ಭ್ರೂಣವಿದೆ ಎಂದು ತಿಳಿದು ಬಂದಿದೆ. ಕೊನೆಗೆ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು 4 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ತೆಗೆದು ಹಾಕಲಾಗಿದ್ದು, ನಂತರ ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ.ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಯನ್ನು Fetus in fetu (FIF) ಎಂದು ಕರೆಯಲಾಗುತ್ತದೆ. ಎರಡು ವೀರ್ಯ ಮತ್ತು ಎರಡು ಅಂಡಾಣುಗಳು ಒಟ್ಟಿಗೆ ಸೇರಿ ಎರಡು ಜೈಗೋಟ್‌ಗಳನ್ನು ರೂಪಿಸಿದಾಗ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ ಎಂದು ಡಾ.ಡಿ.ಕುಮಾರ್ ಹೇಳಿದ್ಧಾರೆ. ಮೊದಲ ಜೈಗೋಟ್‌ನಿಂದ ಮಗು ರೂಪುಗೊಂಡ ನಂತರ, ಎರಡನೇ ಜೈಗೋಟ್ ಮಗುವಿನ ಒಳಗಡೆ ಹೋಗುತ್ತದೆ. ಈ ಕಾರಣದಿಂದಾಗಿ, ಭ್ರೂಣವು ಹೊಟ್ಟೆಯಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಈ ಎರಡನೇ ಜೈಗೋಟ್ ಮಗುವಿನ ದೇಹದ ಹೊರಗೆ ಎಂದರೆ ತಾಯಿಯ ಗರ್ಭದಲ್ಲಿ ರೂಪುಗೊಂಡಿದ್ದರೆ, ಅದು ಅವಳಿ ಮಗುವಿನ ರೂಪವನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
