ಜಮ್ಮು: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ರಸ್ತೆ ಬದಿ ಕಂಡುಬಂದ ವಾರಸುದಾರರಿಲ್ಲದ ಸೂಟ್​ಕೇಸ್ ಬುಧವಾರ ಸ್ಥಳೀಯವಾಗಿ ಬಾಂಬ್ ಭೀತಿಯನ್ನು ಹರಡಿತ್ತು. ಸೇನಾ ಪಡೆ ಕೂಡಲೇ ಸ್ಥಳಕ್ಕೆ ಧಾವಿಸಿದ್ದು ಸೂಟ್​ಕೇಸ್ ವಶಕ್ಕೆ ಪಡೆದು ಪರಿಶೀಲಿಸಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಂಛ್ ಜಿಲ್ಲೆಯ ಭಿಂಬರ್ ಗಲಿ ಮೇನ್ ಚೌಕ್​​ನಲ್ಲಿ ಈ ಸೂಟ್​ಕೇಸ್ ಪತ್ತೆಯಾಗಿತ್ತು. ಕೂಡಲೇ ಈ ಬಗ್ಗೆ ಸೇನೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ, ಸ್ಥಳಕ್ಕಾಗಮಿಸಿದ ಸೇನಾ ಪಡೆಯ ಪರಿಣತರ ತಂಡ ಸೂಟ್​ಕೇಸ್​ ಅನ್ನು ಜಾಗರೂಕತೆಯಿಂದ ತೆರೆದು ಪರಿಶೀಲಿಸಿದಾಗ ಅದರಲ್ಲಿ ಕಂಡಬಂದದ್ದು ಸ್ಫೋಟಕಗಳಲ್ಲ. ಒಂದಷ್ಟು ಉಡುಪುಗಳು ಮತ್ತು ನಿತ್ಯೋಪಯೋಗಿ ವಸ್ತುಗಳು.
ಇದನ್ನೂ ಓದಿ:ಟ್ರಂಪ್ ನೊಬೆಲ್ ನಾಮನಿರ್ದೇಶನಕ್ಕೆ ಕಾಶ್ಮೀರದ ಕನೆಕ್ಷನ್ !
ವಾರಸುದಾರರಿಲ್ಲದ ಸ್ಥಿತಿಯಲ್ಲಿ ಇದ್ದು ಸ್ಥಳೀಯ ಜನರ ಕುತೂಹಲ ಕೆರಳಿಸಿದ ಆ ಸೂಟ್​ಕೇಸ್ ಒಬ್ಬ ಯೋಧನಿಗೆ ಸೇರಿದ್ದಾಗಿತ್ತು. ಕೆಲವೇ ಹೊತ್ತಿನಲ್ಲಿ ಸೂಟ್​ಕೇಸ್ ವಾರಸುದಾರ ಯೋಧ ಸೇನಾ ಪಡೆಯ ತಂಡವನ್ನು ಭೇಟಿ ಮಾಡಿ ಸೂಟ್​ಕೇಸ್ ಮರಳಿಪಡೆದುಕೊಂಡು ಹೋಗಿದ್ದ. ಆತ ಹೇಗೆ ಅದನ್ನು ಕಳೆದುಕೊಂಡ ಎಂಬಿತ್ಯಾದಿ ವಿವರಗಳನ್ನು ಬಹಿರಂಗಪಡಿಸಿಲ್ಲ. (ಏಜೆನ್ಸೀಸ್)
ರಷ್ಯಾ, ಭಾರತ, ಚೀನಾ ವಿದೇಶಾಂಗ ಸಚಿವರ ಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + three =
Remember me
