ನವದೆಹಲಿ:ಕೋವಿಡ್​ 19 ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಅದರಂತೆ, ರೈಲು, ಬಸ್ಸು ಅಲ್ಲದೆ ವಿಮಾನ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಆದರೆ ಸರಕು ಸಾಗಣೆ ರೈಲುಗಳು ಸಂಚರಿಸುತ್ತಿವೆಯಾದರೂ ಅವು ನಿಗದಿತ ಗಮ್ಯ ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ. ಹೀಗಿದ್ದೂ, ಔಷಧಗಳ ದಾಸ್ತಾನು ಸಕಾಲದಲ್ಲಿ ದೇಶದ ಮೂಲೆ ಮೂಲೆಗೂ ತಲುಪಿದವು. ಅದು ಹೇಗೆ ಗೊತ್ತಾ?
ಲೈಫ್​ಲೈನ್​ ಉಡಾನ್​ ಎಂಬ ಯೋಜನೆಯಡಿ ಸರಕು ಸಾಗಣೆ ವಿಮಾನಗಳು ಒಟ್ಟಾರೆ 463.15 ಟನ್​ ಔಷಧ ಮತ್ತಿತರ ಅಗತ್ಯವಸ್ತುಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದವು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೈಫ್​​ಲೈನ್​ ಉಡಾನ್​ ಯೋಜನೆಯಡಿ ಒಟ್ಟಾರೆ 274 ವಿಮಾನಗಳು ಸಂಚಾರ ಕೈಗೊಂಡವು. ಏರ್​ಇಂಡಿಯಾ, ಅಲೈಯನ್ಸ್​ ಏರ್​ ಮತ್ತಿತರ ಖಾಸಗಿ ವಿಮಾನಗಳು ಸಂಚರಿಸಿದವು ಎಂದು ಹೇಳಿದ್ದಾರೆ.
ಒಟ್ಟು 2,73,275 ಕಿ.ಮೀ. ದೂರ ಸಂಚರಿಸಿದ ಸರಕು ಸಾಗಣೆ ವಿಮಾನಗಳು ಅಗತ್ಯವಸ್ತುಗಳನ್ನು ದೇಶದೆಲ್ಲೆಡೆ ತಲುಪಿಸಿದವು ಎಂದು ವಿವರಿಸಿದ್ದಾರೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್​, ಬೆಂಗಳೂರು ಮತ್ತು ಗುವಾಹಟಿಯನ್ನು ಕೇಂದ್ರವಾಗಿಸಿಕೊಂಡು ಈ ವಿಮಾನಗಳು ಕಾರ್ಯಾಚರಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಕ್ವಾರಂಟೈನ್​ ಮುಗಿದ ಕೂಡಲೇ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದ ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್​: ಈಗ ದೆಹಲಿ ಪೊಲೀಸರಿಗೆ ಪತ್ರ ಬರೆದು ಹೇಳಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seventeen =
Remember me
