ನವದೆಹಲಿ:ಆಂತರಿಕ ಕಲಹ ಮುಂದುವರಿದಿರುವ ಸುಡಾನ್​ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ಪೈಕಿ ಇದುವರೆಗೆ 1,100 ಜನರನ್ನು ಭಾರತೀಯ ನೌಕಾಪಡೆಯ ಹಡಗುಗಳ ಮೂಲಕ ಪಾರು ಮಾಡಲಾಗಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಗುರುವಾರ ತಿಳಿಸಿದ್ದಾರೆ. ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯ ಭಾಗವಾಗಿ ಐಎನ್​ಎಸ್ ಸುಮೇಧಾ ಮತ್ತು ತೇಜ್ ನೌಕೆಗಳು, ರಕ್ಷಣೆ ಮಾಡಲಾದ ಭಾರತೀಯರನ್ನು ಆರು ಬ್ಯಾಚ್​ಗಳಲ್ಲಿ ಸೌದಿ ಅರೇಬಿಯಯಾದ ಜೆಡ್ಡಾ ಬಂದರಿಗೆ ಕರೆ ತಂದಿದೆ. ಇನ್ನೂ 297 ಜನರನ್ನು ಕರೆತರಲಾಗಿದ್ದು ಸುರಕ್ಷಿತವಾಗಿ ಆಗಮಿಸಿದ ಭಾರತೀಯರ ಸಂಖ್ಯೆ 1,100ಕ್ಕೇರಿದೆ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ. ಐಎನ್​ಎಸ್ ತರ್ಕಶ್ ಎಂಬ ನೌಕೆ ‘ಆಪರೇಷನ್ ಕಾವೇರಿ’ಗೆ ಗುರುವಾರ ಹೊಸದಾಗಿ ಸೇರಿಕೊಂಡಿದೆ.
ಪ್ರಕ್ಷುಬ್ಧ ಪರಿಸ್ಥಿತಿ: ಸುಡಾನ್​ನಲ್ಲಿ ಅಧಿಕಾರಕ್ಕಾಗಿ ಸೇನೆ ಮತ್ತು ಅರೆಸೇನಾ ಪಡೆ ಆರ್​ಎಸ್​ಎಫ್​ನ ನಡುವೆ ನಡೆಯುತ್ತಿರುವ ಕಾಳಗ ತೀವ್ರಗೊಂಡಿದ್ದು ಭದ್ರತಾ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವತ್ರಾ ಗುರುವಾರ ಹೇಳಿದ್ದಾರೆ. ಭಾರತೀಯರನ್ನು ಸಂಘರ್ಷ ವಲಯಗಳಿಂದ ಸುರಕ್ಷಿತವಾಗಿ ಹೊರ ತರುವುದಕ್ಕೆ ಗಮನ ಕೇಂದ್ರೀಕರಿಸಿ ಸುಡಾನ್​ನಲ್ಲಿನ ಸಂಬಂಧಪಟ್ಟ ಎಲ್ಲರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಭಾರತೀಯರನ್ನು ಮೊದಲು ಸಂಘರ್ಷದ ಸ್ಥಳಗಳಿಂದ ಸುರಕ್ಷಿತವಾಗಿ ಹೊರತಂದು ನಂತರ ಸ್ವದೇಶಕ್ಕೆ ಕರೆ ತರಲಾಗುತ್ತದೆ ಎಂದು ಕ್ವತ್ರಾ ವಿವರಿಸಿದರು. ರಕ್ಷಿಸಲಾದ 360 ಜನರನ್ನು ಈಗಾಗಲೇ ಭಾರತಕ್ಕೆ ಕರೆ ತರಲಾಗಿದ್ದು ಶೀಘ್ರವೇ 246 ಜನರ ಇನ್ನೊಂದು ತಂಡ ಬರಲಿದೆ ಎಂದು ತಿಳಿಸಿದರು.
ಸುಡಾನ್​ನಲ್ಲಿರುವ ಸುಮಾರು 3,400 ಭಾರತೀಯ ಪ್ರಜೆಗಳು ರಕ್ಷಣೆಗಾಗಿ ಆನ್​ಲೈನ್​ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅಥವಾ ಖಾರ್ಟೂಮ್ಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದಾರೆ. ಇದುವರೆಗೆ 1,700ಕ್ಕೂ ಅಧಿಕ ಜನರನ್ನು ಸಂಘರ್ಷದ ಸ್ಥಳಗಳಿಂದ ಪಾರು ಮಾಡಲಾಗಿದೆ.
ಸುಡಾನ್​ನಿಂದ ಭಾರತೀಯರನ್ನು ಕರೆ ತರಲು ನೌಕಾ ಪಡೆಯ ಇನ್ನೊಂದು ಹಡಗನ್ನು ಭಾರತ ನಿಯೋಜಿಸಿದೆ. ಸ್ವದೇಶೀಯರನ್ನು ಕರೆ ತರುವ ಕಾರ್ಯಾಚರಣೆಯಲ್ಲಿ ಐಎನ್​ಎಸ್ ಸುಮೇಧಾ ಮತ್ತು ತೇಜ್ ಜೊತೆ ಐಎನ್​ಎಸ್ ತರ್ಕಶ್ ಸೇರಿಕೊಂಡಿದೆ. ‘ತರ್ಕಶ್’ ಕೂಡ ಗುರುವಾರ ಪೋರ್ಟ್ ಸುಡಾನ್ ತಲುಪಿದೆ ಎಂದು ಕ್ವತ್ರಾ ತಿಳಿಸಿದರು. ಸುಡಾನ್​ನಲ್ಲಿರುವ ಪ್ರತಿ ಭಾರತೀಯರನ್ನು ಸಾಧ್ಯವಾದಷ್ಟು ಬೇಗ ಸುರಕ್ಷಿತವಾಗಿ ಕರೆ ತರುವುದು ಸರ್ಕಾರದ ಗುರಿಯಾಗಿದೆ ಎಂದರು.
ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಬಿಜೆಪಿ ಪಾಲಿಗೆ ಈಶ್ವರಪ್ಪ ಅಂದು ಅರ್ಜುನ ಇಂದು ಭೀಷ್ಮ: ಅಣ್ಣಾಮಲೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 20 =
Remember me
