ಕಟಕ್:ಒರಿಸ್ಸಾದ ಜೈಲೊಂದು ಮದುವೆ ಮಂಟಪವಾಗಿ ಬದಲಾದ ಅಪರೂಪದ ಪ್ರಸಂಗವಿದು. ಜೈಲುಗಳು ಶಿಕ್ಷೆ ನೀಡಲಷ್ಟೇ ಅಲ್ಲ, ಅಪರಾಧಿಗಳು ಸುಧಾರಿಸಿಕೊಳ್ಳಲೂ ಅವಕಾಶ ನೀಡುತ್ತವೆ ಎನ್ನುವುದಕ್ಕೆ ಉದಾಹರಣೆ ಕೂಡ. ಹೌದು, ಒರಿಸ್ಸಾದ ಚೌಡ್ವಾರ್ ಸರ್ಕಲ್ ಜೈಲಿನಲ್ಲಿ ಜೈಲು ಅಧಿಕಾರಿಗಳು ಮತ್ತು ಇತರ ಖೈದಿಗಳ ಸಮ್ಮುಖದಲ್ಲಿ ವಿಚಾರಣಾಧೀನ ಖೈದಿಯೊಬ್ಬ ತಾನು ಅತ್ಯಾಚಾರವೆಸಗಿದ್ದ ಯುವತಿಯೊಂದಿಗೆ ನವಜೀವನ ಆರಂಭಿಸಿದ್ದಾನೆ.
ಕಟಕ್ ಜಿಲ್ಲೆಯ ಗುರುಡಿಜಾಟಿಯಾ ನಿವಾಸಿ ರಾಜೇಶ್ ಸಿಂಗ್ (23) ಕಳೆದ ವರ್ಷ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿಯಾಗಿದ್ದ. ಪೋಕ್ಸೊ ಕೋರ್ಟ್​ನಲ್ಲಿ ಅವನ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಚೌಡ್ವಾರ್ ಸರ್ಕಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅತ್ತ ಅತ್ಯಾಚಾರದ ಫಲವಾಗಿ ಯುವತಿಯು ಗರ್ಭಿಣಿಯಾಗಿದ್ದು, ಗಂಡು ಮಗುವಿನ ತಾಯಿಯಾಗಿದ್ದಾಳೆ.
ಇದನ್ನೂ ಓದಿ:ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?
ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಆರೋಪಿಯು ಸಂತ್ರಸ್ತ ಯುವತಿಯನ್ನು ಮದುವೆಯಾದರೆ ಮಾತ್ರ ಜಾಮೀನಿನ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದ್ದರು ಎನ್ನಲಾಗಿದೆ. ಯುವತಿಗೆ ಕಳೆದ ತಿಂಗಳು 18 ವರ್ಷ ತುಂಬಿದ್ದರಿಂದ ನ್ಯಾಯಾಲಯದ ಆದೇಶದ ಮೇರೆಗೆ ಮತ್ತು ಜೈಲು ಅಧಿಕಾರಿಗಳ ಅನುಮತಿ ಪಡೆದು ಅವರಿಬ್ಬರ ವಿವಾಹವನ್ನು ಗುರುವಾರ (ಫೆಬ್ರವರಿ 25) ಆಯೋಜಿಸಲಾಗಿತ್ತು.
ಜೈಲು ಅಧಿಕಾರಿಗಳು ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದರ ಸಹಾಯದೊಂದಿಗೆ ಜೈಲು ಆವರಣದೊಳಗೆ ಮದುವೆಯ ಸಿದ್ಧತೆಗಳನ್ನು ನಡೆಸಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆ ಈರ್ವರ ಕುಟುಂಬದವರು, ಮಿತ್ರರು ಮತ್ತು ಪೋಕ್ಸೊ ಕೋರ್ಟ್​ನ ವಕೀಲರ ಎದುರಿಗೆ ರಾಜೇಶ್ ಸಿಂಗ್, ಯುವತಿಯೊಂದಿಗೆ ಹೂಮಾಲೆ ಬದಲಿಸಿಕೊಂಡು ವಿವಾಹವಾಗಿದ್ದಾನೆ. ನಂತರ ವಿವಾಹದ ಆರತಕ್ಷತೆ ಸಹ ನಡೆದಿದ್ದು, ಇದರಲ್ಲಿ ಇತರ ಖೈದಿಗಳು ಭಾಗವಹಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯಾದ್ಯಂತ ಸಪ್ತಪದಿ ಯೋಜನೆ ಯಶಸ್ವಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
ವಿವಾಹ ಸಮಾರಂಭದ ನಂತರ ವಧುವು ತನ್ನ ಅತ್ತೆಯ ಮನೆಗೆ ಹೋಗಿದ್ದಾಳೆ. ಆದರೆ ಸಿಂಗ್​ನ ಜಾಮೀನು ಅರ್ಜಿಯು ಮುಂದಿನ ತಿಂಗಳು ವಿಚಾರಣೆಗೆ ಬರಲಿದ್ದು, ಸದ್ಯಕ್ಕೆ ಆತ ಜೈಲಿನಲ್ಲಿಯೇ ಇದ್ದಾನೆ ಎಂದು ಜೈಲು ಅಧಿಕಾರಿ ಕುಲಮನಿ ಬೆಹೆರ ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!

ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

ದಲಿತ ಕಾರ್ಮಿಕ ನಾಯಕಿ ನೋದೀಪ್ ಕೌರ್​​ಗೆ ಜಾಮೀನು



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fourteen =
Remember me
