ನವದೆಹಲಿ:ಭೂಗತ ಪಾತಕಿಯಾಗಿದ್ದ ಛೋಟಾ ರಾಜನ್ (62) ಕೋವಿಡ್​ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾನೆ ಎಂಬ ಸುದ್ದಿಗಳನ್ನು ನವದೆಹಲಿಯ ಏಮ್ಸ್​ ಆಸ್ಪತ್ರೆ ಅಲ್ಲಗಳೆದಿದೆ. ರಾಜನ್​ ಇನ್ನೂ ಬದುಕಿದ್ದಾನೆ. ಅವನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಏಮ್ಸ್​ ಮೂಲಗಳು ಖಚಿತಪಡಿಸಿರುವುದಾಗಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಜನ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆದು ಆತನ ಇನ್ನಿಲ್ಲ ಎಂಬ ಸಂದೇಶಗಳು ಹರಿದಾಡಿದ್ದವು.
ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಛೋಟಾ ರಾಜನ್​ನ್ನು ಮುಂಬೈ ಪೊಲೀಸರು 2015 ರಲ್ಲಿ ಇಂಡೊನೇಷಿಯಾದಲ್ಲಿ ಬಂಧಿಸಿ ಭಾರತಕ್ಕೆ ಕರೆ ತಂದಿದ್ದರು. ಆತನ ಮೇಲೆ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ಬೆದರಿಕೆ, ಹತ್ಯೆಯತ್ನ ಪ್ರಕರಣಗಳು ದಾಖಲಾಗಿದ್ದವು.
Underworld don Chhota Rajan is still alive. He is admitted at AIIMS for treatment of#COVID19: AIIMS official
(File photo)pic.twitter.com/gvAgKDuPqC
— ANI (@ANI)May 7, 2021

ಪತ್ರಕರ್ತ ಜೋತಿರ್ಮಯ್ ಡೇ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಭೀತಾಗಿದ್ದರಿಂದ 2018 ರಲ್ಲಿ ಛೋಟಾ ರಾಜನ್​​ಗೆ ಮೊಕಾ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ನಂತರ ದೆಹಲಿಯ ತಿಹಾರ್ ಜೈಲಿನಲ್ಲಿ ಆತನನ್ನು ಇರಿಸಲಾಗಿತ್ತು. ಇತ್ತೀಚೆಗೆ ಕೆಲ ದಿನಗಳ ಹಿಂದೆ ಕೋವಿಡ್​ ಸೋಂಕಿಗೆ ತುತ್ತಾಗಿರುವ ರಾಜನ್​ನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.
1959 ರಲ್ಲಿ ಮುಂಬೈನಲ್ಲಿ ಜನಿಸಿದ್ದ ಛೋಟಾ​ ಮೊದಲ ಹೆಸರು ರಾಜೇಂದ್ರ ನಿಖಲಾಜೆ. ಮುಂಬೈ ಸಿನಿಮಾ ಮಂದಿರಗಳಲ್ಲಿ ಬ್ಲಾಕ್​ ಟಿಕೆಟ್ ಮಾರಾಟ ಮಾಡುತ್ತಿದ್ದ ಅವನು, ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಗುರುತಿಸಿಕೊಂಡಿದ್ದ. 1992 ಮುಂಬೈ ಸರಣಿ ಸ್ಪೋಟದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ದಾವೋದ್ ಇಬ್ರಾಹಿಂನ ನಂತರ ಚೋಟಾ ರಾಜನ್ ಮುಂಬೈ ಭೂಗತ ಲೋಕದ ಡಾನ್​ ಆಗಿ ಮೆರೆದಿದ್ದ. ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
10 ಬಾರಿ ನೆಗೆಟಿವ್​ ವರದಿ ಬಂದರೂ ಬೆಂಬಿಡದ ಕರೊನಾ! ಸೋಂಕು ಇಲ್ಲವೆಂದುಕೊಂಡೇ ಸಾವನ್ನಪ್ಪಿದ ಮಹಿಳೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 7 =
Remember me
