ಮುಂಬೈ:ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ತಮ್ಮ ನೂರಾ ಎಂಬಾತನ ಮಗ ಸೊಹೈಲ್ ಕಸ್ಕರ್ ಅಮೆರಿಕದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ.
ನಾರ್ಕೆ ಟೆರರ್ ಕೇಸ್ ಸಂಬಂಧಿಸಿ ಅಮೆರಿಕದ ಭದ್ರತಾ ಏಜೆನ್ಸಿಗಳ ಕಸ್ಟಡಿಯಲ್ಲಿದ್ದ ಸೊಹೈಲ್ ಕಸ್ಕರ್​ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ಭಾರತ ಸರ್ಕಾರ ಮಾಡಿತ್ತು. ಮುಂಬೈ ಪೊಲೀಸರು ಈ ನಿಟ್ಟಿನಲ್ಲಿ ಅಮೆರಿಕದ ಭದ್ರತಾ ಏಜೆನ್ಸಿಗಳ ಜತೆಗೆ ಸಂಪರ್ಕದಲ್ಲಿದ್ದರು. ಆದಾಗ್ಯೂ, ಆತ ಅಲ್ಲಿಂದ ಯಾವ ರೀತಿ ಪರಾರಿಯಾದ ಎಂಬ ಅಂಶ ಬೆಳಕಿಗೆ ಬಂದಿಲ್ಲ.
ದುಬೈ ಮೂಲಕ ಪಾಕಿಸ್ತಾನ ತಲುಪಿದ್ದು ಖಚಿತವಾಗಿದೆ. ಇತ್ತೀಚೆಗೆ ಆತನ ಧ್ವನಿ ಇಂಟರ್​ಸೆಪ್ಟರ್ ಮೂಲಕ ಭದ್ರತಾಪಡೆಗಳಿಗೆ ಸಿಕ್ಕಿದ್ದು, ಅದು ಪಾಕಿಸ್ತಾನದಿಂದ ಹೊರಟ ತರಂಗಾಂತರದಲ್ಲಿತ್ತು ಎಂಬುದು ಖಚಿತವಾಗಿದೆ. ಸೊಹೈಲ್ ಕಸ್ಕರ್ ಅನ್ನು ನಾರ್ಕೆ ಟೆರರಿಸಂ ಕೇಸ್​ನಲ್ಲಿ 2014ರಲ್ಲಿ ಸ್ಪೇನ್​ನಲ್ಲಿ ಬಂಧಿಸಲಾಗಿತ್ತು.
ಹಳಿ ತಪ್ಪಿದ ಗುವಾಹಟಿ- ಬಿಕಾನೇರ್ ಎಕ್ಸ್‌ಪ್ರೆಸ್ ರೈಲು: ಮೂವರು ಸಾವು, 12 ಬೋಗಿ ಚೆಲ್ಲಾಪಿಲ್ಲಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 10 =
Remember me
