ನಾಗ್ಪುರ:ಬ್ಲ್ಯಾಕ್​ ಮ್ಯಾಜಿಕ್​ನಲ್ಲಿ ತೊಡಗಿದ್ದ ಐವರನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಫೆ.26ರಂದು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬ್ಲ್ಯಾಕ್​ ಮ್ಯಾಜಿಕ್​ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ಬೆತ್ತಲೆಯಾಗಿ ಪೂಜೆ ಮಾಡಿದರೆ 50 ಕೋಟಿ ರೂಪಾಯಿ ಮಳೆಯಂತೆ ಸುರಿಯಲಿದೆ ಎಂದು ಅಪ್ರಾಪ್ತೆಯನ್ನು ಮರಳು ಮಾಡಲು ಹೋಗಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿಯೊಬ್ಬ ಈ ತಿಂಗಳ ಆರಂಭದಲ್ಲಿ ಅಪ್ರಾಪ್ತೆಯ ಬಳಿ ತೆರಳಿದ್ದ. ಆತನ ಸಹವರ್ತಿಗಳು ಸೂಚನೆಯಂತೆ ವಿಶೇಷ ಪೂಜೆಯೊಂದನ್ನು ಮಾಡಿದರೆ ನೀನು ಶ್ರೀಮಂತೆ ಆಗಬಹುದೆಂದು ಆಕೆಗೆ ತಿಳಿಸಿದ್ದಾನೆ. ಆದರೆ, ಪೂಜೆ ಪರಿಣಾಮಕಾರಿ ಆಗಬೇಕಾದರೆ ನೀನು ಬೆತ್ತಲೆಯಾಗಬೇಕೆಂದು ಸಹ ಹೇಳಿದ್ದಾನೆ.
ಇದನ್ನೂ ಓದಿರಿ:ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?
ಇದರಿಂದ ಅನುಮಾನಗೊಂಡ ಯುವತಿ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದಾಗ ಬೆಂಬಿಡದ ಆತನ ಅಪ್ರಾಪ್ತೆಗೆ ಸಾಕಷ್ಟು ಒತ್ತಾಯಿಸಿದ್ದಾರೆ. ಕೊನೆಗೆ ಅವನ ಕಾಟ ತಾಳಲಾರದೇ ಯುವತಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಇದೀಗ ಪೊಲೀಸರು ಐವರು ಆರೋಪಿಗಳಾದ ವಿಕ್ಕಿ ಗಣೇಶ್​ ಖಾಪ್ರೆ (20), ದಿನೇಶ್​ ಮಹದೇವ್​ ನಿಖಾರೆ (25), ರಾಮಕೃಷ್ಣ ದಾದಾಜಿ ಮಹಾಸ್ಕರ್​ (41), ವಿನೋದ್​ ಜಯರಾಮ್​ ಮಾಸ್ರಮ್​ (42) ಮತ್ತು ಸೊಪನ್​ ಹರಿಬಾಹು ಕುಮ್ರೆ (35) ಬಂಧಿಸಿದ್ದಾರೆ.
ಹುಡುಗಿ ನೀಡಿದ ದೂರಿನ ಆಧಾರದ ಮೇಲೆ ವಿಕ್ಕಿ ಕಾಪ್ರೆ ಅನ್ನು ನಾಗ್ಪುರ ಪೊಲೀಸರು ಮೊದಲು ಬಂಧಿಸಿದರು. ಬಳಿಕ ವಿಚಾರಣೆ ನಡೆಸಿದಾಗ ಕಾಪ್ರೆ ತನ್ನ ಸಹವರ್ತಿಗಳ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಬಳಿಕ ಇನ್ನುಳಿದ ಆರೋಪಿಗಳನ್ನು ವಿವಿಧ ಪ್ರದೇಶಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಬ್ಲ್ಯಾಕ್ ​ಮ್ಯಾಜಿಕ್​ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ದುಬಾರಿ ದುನಿಯಾ: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 25 ರೂ. ಹೆಚ್ಚಳ..!

ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದು ದೇಶದ ಜನತೆಗೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ ಸಂಪನ್ನ; ದೇಣಿಗೆ 2,500 ಕೋಟಿ ರೂ. ದಾಟುವ ನಿರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
