ನವದೆಹಲಿ:2017-18ರ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಕೃಷಿಕರಿಗಿಂತ ನಿರುದ್ಯೋಗಿಗಳೇ ಹೆಚ್ಚು!
ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ. 2018ರಲ್ಲಿ 12,936 ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಒಟ್ಟು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.9.6ರಷ್ಟು. 18ರಿಂದ 60ವರ್ಷದ 1,34,516 ಮಂದಿ ಆತ್ಯಹತ್ಯೆಗೆ ಶರಣಾಗಿದ್ದಾರೆ.
ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿ ಆತ್ಮಹತ್ಯೆ-2018’ ಎಂಬ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳಿವೆ. ಇದರ ಪ್ರಕಾರ 2017ರಲ್ಲೂ ರೈತರಿಗಿಂತ ನಿರುದ್ಯೋಗಿಗಲೇ ಆತ್ಮಹತ್ಯೆ ಮಾಡಿಕೊಂಡವರು ಹೆಚ್ಚು.
2018ರಲ್ಲಿ 10.349 (ಶೇ.7.7) ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದೇ ಅವಧಿಯಲ್ಲಿ 12,936 (ಶೇ.9.6)ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 10,687 ಪುರುಷರು, 2,249 ಮಹಿಳೆಯರು.
ಆತ್ಮಹತ್ಯೆ ಎಲ್ಲಕ್ಕಿಂತ ಹೆಚ್ಚು ಆತ್ಮಹತ್ಯೆ ನಡೆದಿರುವುದು ಕೇರಳದಲ್ಲಿ ಒಟ್ಟು 1585 (ಶೇ.12.3), ತಮಿಳುನಾಡಿನಲ್ಲಿ 1,579 (ಶೇ.9.7), ಮಹಾರಾಷ್ಟ್ರದಲ್ಲಿ 1,260 (ಶೇ.8.5), ಕರ್ನಾಟಕದಲ್ಲಿ 1,094 ಮತ್ತು ಉತ್ತರಪ್ರದೇಶದಲ್ಲಿ 902 (ಶೇ.7) ಎಂದು ಅಂಕಿಗಳು ತಿಳಿಸಿವೆ.
ಅಂಕಿ ಅಂಶಗಳ ಪ್ರಕಾರ 2017ಕ್ಕಿಂತ 2018ರಲ್ಲಿ 0.3 ಹೆಚ್ಚಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eight =
Remember me
