ಮುಂಬೈ:ಮನುಷ್ಯನ ಜೀವನಕ್ಕೆ ಹಣ ಅತಿ ಮುಖ್ಯ. ಅತಿ ಕಷ್ಟದ ಸಮಯದಲ್ಲಿ ಹಣವಿಲ್ಲದಿದ್ದರೆ ಆತ ಎಂತಹ ಹೇಯ ಕೃತ್ಯಕ್ಕಾದರೂ ಕೈ ಹಾಕಿಬಿಡಬಹುದು. ಅದೇ ರೀತಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿರುವ 45 ವರ್ಷದ ವ್ಯಕ್ತಿಯೊಬ್ಬ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ. ಆತನ ಹೆಂಡತಿಗೆ ಬ್ರೈನ್​ ಟ್ಯೂಮರ್​ ಕಾಯಿಲೆ ಇದ್ದು, ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗುತ್ತಂತೆ. ತಿಂಗಳುಗಳಿಂದ ಆ ಖರ್ಚನ್ನು ಭರಿಸಿದ್ದ ಆತನಿಗೆ ಜೀವನವೇ ಸಾಕೆನಿಸಿಬಿಟ್ಟಿದೆ. ಶನಿವಾರ ರಾತ್ರಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಹೆಂಡತಿಯನ್ನು ಕೊಲೆ ಮಾಡಿಬಿಟ್ಟಿದ್ದಾನೆ. ಅದಾದ ನಂತರ ರಕ್ತದ ಕಲೆಯಾಗಿದ್ದ ತನ್ನ ಬಟ್ಟೆಯನ್ನು ಮನೆಯಿಂದ ಹೊರಗೆ ತಂದು ಎಸೆದಿದ್ದಾನೆ.
ಇದನ್ನು ಕಂಡ ಗ್ರಾಮಸ್ಥರು ಅನುಮಾನ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಭಾನುವಾರದಂದು ಆತನನ್ನು ಬಂಧಿಸಲಾಗಿದೆ. ಕಾಯಿಲೆಯನ್ನು ನೋಡಿ ನೋಡಿ ಬೇಸತ್ತಿದ್ದರಿಂದ ಈ ಕೆಲಸ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಚಿಕ್ಕಮ್ಮನ ಮನೆಗೆ ಬಂದು ಕರೊನಾ ಲಸಿಕೆ ಕೊಟ್ಟ ಮಗಳು; ಸ್ವಲ್ಪ ಹೊತ್ತಲ್ಲಿ ಮನೆಯಲ್ಲಿದ್ದ ಚಿನ್ನವೆಲ್ಲ ಮಾಯ!

ಜಯಲಲಿತಾ ಸಾವಿಗೆ ಯಾರು ಹೊಣೆ? ಸ್ಫೋಟಕ ಹೇಳಿಕೆ ನೀಡಿದ ಸಿಎಂ ಪಳನಿಸ್ವಾಮಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − three =
Remember me
