ನವದೆಹಲಿ:ಕರೊನಾ 2ನೇ ಅಲೆಯ ಕಾಟದಿಂದಾಗಿ ಏಪ್ರಿಲ್ ತಿಂಗಳಲಿ 70 ಲಕ್ಷ ಜನರು ನಿರುದ್ಯೋಗಿಗಳಾಗಿದ್ದು ಮಾರ್ಚ್​ನಲ್ಲಿದ್ದ ಶೇ. 6.5 ನಿರುದ್ಯೋಗ ದರ ಈಗ ಶೇ. 7.97ಕ್ಕೆ ಜಿಗಿದಿದೆ. ನಿರುದ್ಯೋಗ ದರ ನಾಲ್ಕು ತಿಂಗಳಲ್ಲೇ ಗರಿಷ್ಠ ಪ್ರಮಾಣ ತಲುಪಿದೆ ಎಂದು ಖಾಸಗಿ ಸಂಸ್ಥೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಹೇಳಿದೆ. ರಾಜ್ಯ ಸರ್ಕಾರಗಳು ಲಾಕ್​ಡೌನ್ ವಿಸ್ತರಿಸುತ್ತಿರುವುದರಿಂದ ಭವಿಷ್ಯ ಇನ್ನೂ ಕರಾಳವಾಗಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ. ‘ಉದ್ಯೋಗ ಲಭ್ಯತೆ ಪ್ರಮಾಣ ಕುಸಿದಿದೆ. ಲಾಕ್​ಡೌನ್ ಇದಕ್ಕೆ ಕಾರಣವಾಗಿರಬಹುದು’ ಎಂದು ಸಿಎಂಐಇ ಆಡಳಿತ ನಿರ್ದೇಶಕ ಮಹೇಶ್ ವ್ಯಾಸ್ ವಿಶ್ಲೇಷಿಸಿದ್ದಾರೆ. ಕಳೆದ ವರ್ಷ ಮಾರ್ಚ್​ನಲ್ಲಿ ವಿಧಿಸಿದ ಲಾಕ್​ಡೌನನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದು ಕೊಂಡಿದ್ದರು. ಕೆಲಸಗಾರರ ಸಂಬಳದಲ್ಲಿ ಕಡಿತ ಮಾಡಲಾಗಿತ್ತು. ಉದ್ಯೋಗ ಕ್ಷೇತ್ರದ ಭವಿಷ್ಯ ಮಂಕಾಗಿರುವುದರಿಂದ ಭಾರತ ಈ ವರ್ಷ ಎರಡಂಕಿ ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿ ತಲುಪುದು ಕಷ್ಟವಿದೆ ಎಂಬ ಭೀತಿ ಎದುರಾಗಿದೆ.
ಪ್ರಧಾನಿ ಮೇಲೆ ಹೆಚ್ಚಿದ ಲಾಕ್​ಡೌನ್ ಒತ್ತಡ
ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು ಕರೊನಾ ಸಾಂಕ್ರಾಮಿಕತೆಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ದೇಶಾದ್ಯಂತ ಲಾಕ್​ಡೌನ್ ಹೇರಬೇಕೆಂಬ ಕೂಗು ವ್ಯಾಪಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ಈ ಕುರಿತಂತೆ ಒತ್ತಡಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಮಾರ್ಚ್ ನಲ್ಲಿ ಹಠಾತ್ತನೆ ಲಾಕ್​ಡೌನ್ ಘೋಷಿಸಿದ್ದರಿಂದ ಲಕ್ಷಾಂತರ ವಲಸೆ ಕಾರ್ವಿುಕರು ಯಾವುದೇ ವಾಹನ ಸೌಕರ್ಯವಿಲ್ಲದೆ ನಡೆದುಕೊಂಡೇ ಸಾವಿರಾರು ಕಿಲೋ ಮೀಟರ್ ದೂರ ನಡೆದು ಊರು ಸೇರಿದ್ದು ಇದೊಂದು ಮಹಾ ಮಾನವ ದುರಂತ ಎಂದೇ ಪರಿಗಣಿಸಲಾಗಿದೆ. ಸ್ಥಳೀಯವಾಗಿ ಲಾಕ್​ಡೌನ್ ವಿಧಿಸುವ ಆಯ್ಕೆಯನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಬಿಟ್ಟಿತ್ತು. ಸಂಪೂರ್ಣ ಲಾಕ್​ಡೌನ್ ಹೇರಿಕೆ ‘ಕೊನೆಯ ಆಯ್ಕೆ’ ಆಗಿರಬೇಕು ಎಂದು ಮೋದಿ ಎರಡು ವಾರಗಳ ಹಿಂದೆ ಹೇಳಿದ್ದರು. ಆದರೆ ಈಗ ಅವರ ರಾಜಕೀಯ ಮಿತ್ರರಿಂದ ಹಿಡಿದು ಪ್ರಮುಖ ವಾಣಿಜ್ಯೋದ್ಯಮಿಗಳು ಮಾತ್ರವಲ್ಲದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ರ ಪ್ರಧಾನ ವೈದ್ಯಕೀಯ ಸಲಹೆಗಾರ ಅಂತೋಣಿ ಫೌಸಿ ಅವರಂಥವರೂ ಆಗ್ರಹಿಸುತ್ತಿದ್ದಾರೆ. ಸೇನೆ ಮತ್ತು ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ತಾತಾಲ್ಕಿಕ ಆಸ್ಪತ್ರೆಗಳನ್ನು ನಿರ್ವಿುಸಬೇಕು ಎಂದೂ ಸಲಹೆ ನೀಡಿದ್ದಾರೆ. ಇದು ಮೋದಿಯವರಿಗೆ ಇತ್ತ ದರಿ ಅತ್ತ ಪುಲಿ ಎಂಬ ಸನ್ನಿವೇಶವನ್ನು ಸೃಷ್ಟಿಸಿದೆ. ಸಂಪೂರ್ಣ ಲಾಕ್​ಡೌನ್ ಹೇರಿದರೆ ಆರ್ಥಿಕ ದುರಂತ ಉಂಟಾಗುತ್ತದೆ. ಒಂದು ವೇಳೆ ಲಾಕ್​ಡೌನ್ ಹೇರದಿದ್ದರೆ ಸಾರ್ವಜನಿಕ ಆರೋಗ್ಯ ಅನಾಹುತ ಸಂಭವಿಸುತ್ತದೆ ಎಂಬ ಅಭಿಪ್ರಾಯ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ನಿಷ್ಕ್ರಿಯತೆಯಿಂದ ಪ್ರಾಣಹಾನಿ
ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಇದುವರೆಗೆ ಕೈಗೊಂಡ ಕ್ರಮಗಳು ಏನೇನೂ ಸಾಲದು. ಮೋದಿ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಅಪಾರ ಪ್ರಾಣಹಾನಿ ಆಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಟೀಕಾ ಪ್ರಹಾರ ಮಾಡಿದ್ದಾರೆ. ‘ನ್ಯಾಯ್’ ಯೋಜನೆಯ ರಕ್ಷಣೆಯೊಂದಿಗೆ ಲಾಕ್​ಡೌನ್ ಹೇರಿಕೆಯೊಂದೇ ಸೋಂಕು ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
