ಚೆನ್ನೈ :ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಗಂಡ ತನ್ನ ಹೆಂಡತಿಯ ವಿರುದ್ಧ ಕ್ರಮಕೈಗೊಳ್ಳಲು ಕೌಟುಂಬಿಕ ಹಿಂಸಾಚಾರ ಕಾಯ್ದೆಯಂತಹ ಯಾವುದೇ ಕಾನೂನು ಇಲ್ಲದಿರುವುದು ದುರದೃಷ್ಟಕರ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸರ್ಕಾರಿ ಪಶುವೈದ್ಯರೊಬ್ಬರನ್ನು ಅವರ ಮಾಜಿ ಹೆಂಡತಿ ಸಲ್ಲಿಸಿದ ದೂರಿನ ಮೇಲೆ ಕೆಲಸದಿಂದ ತೆಗೆದುಹಾಕಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಾ ನ್ಯಾಯಾಲಯ ಈ ಮಾತು ಹೇಳಿದೆ.
ಪಿ.ಶಶಿಕುಮಾರ್​ ಎಂಬುವರು ತಮಿಳುನಾಡು ಪಶುಸಂಗೋಪನಾ ನಿರ್ದೇಶಕರು ತಮ್ಮನ್ನು ಅಮಾನತುಗೊಳಿಸಿದ್ದ ಆದೇಶದ ವಿರುದ್ಧ ರಿಟ್​ ಅರ್ಜಿ ಸಲ್ಲಿಸಿದ್ದರು. 2015 ರಲ್ಲಿ ಶಶಿಕುಮಾರ್​ ಪತ್ನಿಯು ಸೇಲಂನ ಮಹಿಳಾ ಕೋರ್ಟ್​ನಲ್ಲಿ ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಶಶಿಕುಮಾರ್​ ಕೂಡ ತಮ್ಮ ಹೆಂಡತಿಯೇ ತಮ್ಮ ಮೇಲೆ ಕ್ರೌರ್ಯದಿಂದ ವರ್ತಿಸುತ್ತಿದ್ದು, ಬಿಟ್ಟು ಹೋಗಿದ್ದಾರೆ ಎಂದು ಕೋರ್ಟ್​ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ
ವಿಚ್ಛೇದನದ ಅರ್ಜಿ ಇತ್ಯರ್ಥವಾಗುವುದಕ್ಕೆ ನಾಲ್ಕು ದಿನ ಮುಂಚಿತವಾಗಿ ಶಶಿಕುಮಾರ್​ ಪತ್ನಿ ಕೌಟುಂಬಿಕ ಹಿಂಸೆ ಬಗ್ಗೆ ಇಲಾಖೆ ನಿರ್ದೇಶಕರಿಗೆ ದೂರು ರವಾನಿಸಿದರು. ಅದರ ಆಧಾರದ ಮೇಲೆ ನಿರ್ದೇಶಕರು ಫೆಬ್ರವರಿ 18, 2020 ರಂದು ಶಶಿಕುಮಾರ್​ರನ್ನು ಅಮಾನತುಗೊಳಿಸಿದರೆ, ಫೆಬ್ರವರಿ 19 ರಂದು ವಿಚ್ಛೇದನದ ಆದೇಶ ಹೊರಟಿತ್ತು ಎನ್ನಲಾಗಿದೆ.
ಶಶಿಕುಮಾರ್​ ಅವರ ಅರ್ಜಿಯ ವಿಚಾರಣೆ ಪೂರೈಸಿದ ನ್ಯಾಯಮೂರ್ತಿ ಎಸ್​.ವೈದ್ಯನಾಥನ್ ಅವರು, “ಮಹಿಳೆಯು ವಿಚ್ಛೇದನ ಆದೇಶವನ್ನು ನಿರೀಕ್ಷಿಸಿದ್ದು, ಅರ್ಜಿದಾರರಿಗೆ ಅನಗತ್ಯ ತೊಂದರೆ ಉಂಟುಮಾಡುವ ದೃಷ್ಟಿಯಿಂದ ದೂರು ನೀಡಿರುವುದು ದೂರಿನ ಸಮಯದಿಂದ ಸ್ಪಷ್ಟವಾಗಿ ತಿಳಿಯುತ್ತದೆ” ಎಂದು ಅಭಿಪ್ರಾಯಪಟ್ಟರು. ಹದಿನೈದು ದಿನಗಳೊಳಗೆ ಶಶಿಕುಮಾರ್​ ಅವರನ್ನು ಸೇವೆಗೆ ಪುನರ್​ನಿಯುಕ್ತಿಗೊಳಿಸಬೇಕೆಂದು ರಾಜ್ಯ ಪಶುಸಂಗೋಪನೆ ಇಲಾಖೆ ನಿರ್ದೇಶಕರಿಗೆ ಆದೇಶ ನೀಡಿದರು.(ಏಜೆನ್ಸಿಸ್)
VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ

“ಜೂನ್​ ತಿಂಗಳಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್​ ಪೂರೈಕೆ”

VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
