ಜೈಪುರ:ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಗೆ ಪತ್ನಿ ಬೈದ ಪರಿಣಾಮ ಆತ ಟಾಯ್ಲೆಟ್​ ಕ್ಲೀನರ್​ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಭರತ್​ಪುರ ಜಿಲ್ಲೆಯ ಕುಮ್ಹೆರ್​​ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು ಮೃತ ದುರ್ದೈವಿಯನ್ನು ವಿನೋದ್​ ಎಂದು ಗುರುತಿಸಲಾಗಿದೆ.
ಮದ್ಯ ವ್ಯಸನಿಯಾಗಿದ್ದ ವಿನೋದ್​ ಹಾಗೂ ಆತನ ಪತ್ನಿ ನಡುವೆ ಪ್ರತಿನಿತ್ಯ ಗಲಾಡಟೆಯಾಗುತ್ತಿತ್ತು. ಕುಡಿತ ಬಿಡುವಂತೆ ಆಕೆ ಹಲವು ಭಾರೀ ಒತ್ತಾಯಿಸಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಜೈಲಿನಿಂದ ಹೊರಬಂದ ಬಳಿಕ ಸತ್ಯೇಂದರ್​ ಜೈನ್​ರನ್ನು ಭೇಟಿ ಮಾಡಿದ ಕೇಜ್ರಿವಾಲ್​
ಶನಿವಾರ ಕುಡಿತದ ವಿಚಾರವಾಗಿ ಆತನ ಪತ್ನಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ದಂಪತಿಗಳ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿನೋದ್​ ರೂಂ ಬಾಗಿಲು ಹಾಕಿಕೊಂಡಿದ್ಧಾನೆ.
ಇದಾದ ಕೆಲ ಕ್ಷಣಗಳ ಬಳಿಕ ಟಾಯ್ಲೆಟ್​ ಕ್ಲೀನರ್​ ಸೇವಿಸಿ ವಿನೋದ್​ ಜೋರಾಗಿ ಕೂಗಲು ಶುರು ಮಾಡಿದ್ದಾನೆ. ಕುಟುಂಬಸ್ಥರು ಆತನನ್ನು ತಕ್ಷಣವೇ ಆತನನ್ನು ಕರೆದುಕೊಮಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − eighteen =
Remember me
