ಡೆಹ್ರಾಡೂನ್​:ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಾಡಲಾಗಿದ್ದ ವಾಗ್ದಾನದ ಪ್ರಕಾರ ಉತ್ತರಾಖಂಡ ಸರ್ಕಾರವು ಏಕರೂಪ ನಾಗರೀಕ ಸಂಹಿತೆ (UCC)ಯನ್ನು ಜಾರಿ ಮಾಡಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಏಕರೂಪ ನಾಗರೀಕ ಸಂಹಿತೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಈ ಏಕರೂಪ ನಾಗರಿಕ ಸಂಹಿತೆಯಲ್ಲಿ ಯಾವುದೇ ಜಾತಿ, ಧರ್ಮ, ಪ್ರಾಂತ್ಯವೆಂಬ ಬೇಧವಿರುವುದಿಲ್ಲ, ದೇಶದ ಸರ್ವರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಇದರ ಅಡಿಯಲ್ಲಿ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಧಾಮಿ ತಿಳಿಸಿದ್ದಾರೆ.
ಇನ್ನೂ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇರುವಂತವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ಏಕರೂಪ ನಾಗರೀಕ ಸಂಹಿತೆ ಕಾಯ್ದೆಯಡಿ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಲಿವ್-ಇನ್ ಸಂಬಂಧದಿಂದ ಜನಿಸಿದ ಮಗುವನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗುತ್ತದೆ.
विधानसभा में ऐतिहासिक "समान नागरिक संहिता विधेयक" पेश किया।#UCCInUttarakhandpic.twitter.com/uJS1abmeo7
ಇದನ್ನೂ ಓದಿ:ಕುಮಾರ ಪರ್ವತದಲ್ಲಿ ಟ್ರೆಕ್ಕಿಂಗ್​ಗೆ ನಿರ್ಬಂಧ; ಅರಣ್ಯ ಸಚಿವರು ಕೊಟ್ಟ ಕಾರಣ ಹೀಗಿದೆ
ಸಾರ್ವಜನಿಕ ನೀತಿ ಮತ್ತು ನೈತಿಕತೆಗೆ ವಿರುದ್ಧವಾದ ಪ್ರಕರಣಗಳಲ್ಲಿ ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಲಾಗುವುದಿಲ್ಲ. ಒಬ್ಬ ಸಂಗಾತಿ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಒಬ್ಬ ಸಂಗಾತಿ ಅಪ್ರಾಪ್ತ ವಯಸ್ಕನಾಗಿದ್ದರೆ ಮತ್ತು ಒಬ್ಬ ಸಂಗಾತಿಯ ಒಪ್ಪಿಗೆಯನ್ನು ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ ಅಥವಾ ತಪ್ಪಾಗಿ ನಿರೂಪಣೆ (ಗುರುತಿಗೆ ಸಂಬಂಧಿಸಿದಂತೆ) ಮಾಡಿದ್ದರೂ ನೋಂದಣಿ ಮಾಡಲಾಗುವುದಿಲ್ಲ. ಲಿವ್-ಇನ್ ಸಂಬಂಧದ ವಿವರಗಳನ್ನು ಸ್ವೀಕರಿಸಲು ಸರ್ಕಾರದ ವತಿಯಿಂದ ವೆಬ್‌ಸೈಟ್​ಅನ್ನು ಸಿದ್ಧಪಡಿಸಲಾಗುತ್ತಿದೆ.
ನೋಂದಾಯಿತ ಲಿವ್-ಇನ್ ಸಂಬಂಧಗಳ ಮುಕ್ತಾಯಕ್ಕೆ ಲಿಖಿತ ಹೇಳಿಕೆಯ ಅಗತ್ಯವಿರುತ್ತದೆ. ನಿಗದಿತ ಸ್ವರೂಪದಲ್ಲಿ ರಿಜಿಸ್ಟ್ರಾರ್ ಸಂಬಂಧದ ಅಂತ್ಯಕ್ಕೆ ಕಾರಣಗಳು ತಪ್ಪು ಅಥವಾ ಸಂಶಯಾಸ್ಪದ ಎಂದು ಭಾವಿಸಿದರೆ ಪೊಲೀಸ್ ತನಿಖೆಗೆ ಹೇಳಬಹುದು. 21 ವರ್ಷದೊಳಗಿನವರಾಗಿದ್ದರೆ ಅವರ ಪೋಷಕರಿಗೆ ತಿಳಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮೂಲಕ ಬಿಜೆಪಿ ಆಡಳಿವಿರುವ ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿದೆ. ಈ ಮಸೂದೆ ಪ್ರಕಾರ ಮಗ ಮತ್ತು ಮಗಳಿಗೆ ಸಮಾನ ಆಸ್ತಿ ಹಕ್ಕು, ಕಾನೂನು ಬದ್ಧ ಮತ್ತು ನ್ಯಾಯಸಮ್ಮತವಲ್ಲದ ಮಕ್ಕಳ ನಡುವಿನ ವ್ಯತ್ಯಾಸವನ್ನು ತೊಡೆದುಹಾಕುವುದು, ದತ್ತು ಪಡೆದ ಮತ್ತು ಜೈವಿಕವಾಗಿ ಜನಿಸಿದ ಮಕ್ಕಳನ್ನು ಸೇರಿಸುವುದು ಮತ್ತು ಸಾವಿನ ನಂತರ ಸಮಾನ ಆಸ್ತಿ ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
