ನವದೆಹಲಿ:ಕರೊನಾ ಎರಡನೇ ಅಲೆಗೆ ಬೃಹತ್ ಕೊಡುಗೆ ನೀಡಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ತಕ್ಷಣದಿಂದಲೇ ಕೇಂದ್ರ ಸರ್ಕಾರ ಹೇಳಿರುವ ಪ್ರಯಾಣ ನಿರ್ಬಂಧಗಳನ್ನು ಜಾರಿಗೆ ತರುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ ಸೂಚಿಸಿದ್ದಾರೆ. ಒಮಿಕ್ರಾನ್​ ರೂಪಾಂತರಿಯ ತಡೆಗಾಗಿ ಕೇಂದ್ರ ಸರ್ಕಾರದ ನಿಯಮಗಳ ರೀತಿಯೇ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ ಪರೀಕ್ಷೆ ಮತ್ತು ನೆಗೆಟೀವ್ ಬಂದರೂ ಮನೆಯಲ್ಲೇ 14 ದಿನ ಕ್ವಾರಂಟೈನ್ ಎರಡನ್ನೂ ಕಡ್ಡಾಯಗೊಳಿಸಬೇಕು ಎಂದಿದ್ದಾರೆ.
ಕೇಂದ್ರ ಸರ್ಕಾರ ವಿಧಿಸಿದ ನಿಯಮಗಳಿಗೆ ಭಿನ್ನವಾಗಿ, ಮಹಾರಾಷ್ಟ್ರ ಸರ್ಕಾರ, ಒಮಿಕ್ರಾನ್​ ಪತ್ತೆಯಾಗಿರುವ ದೇಶಗಳಿಂದ ಬಂದಿಳಿಯುವ ಪ್ರಯಾಣಿಕರಿಗೆ ಹೊಸ ಪರೀಕ್ಷೆ ಮತ್ತು ಕ್ವಾರಂಟೈನ್​ ನಿಯಮಗಳನ್ನು ತಕ್ಷಣದಿಂದ ಅನ್ವಯಿಸುವುದಿಲ್ಲ ಎಂದಿತ್ತು. ಎರಡು ದಿನಗಳ ಅಂದರೆ ಡಿಸೆಂಬರ್​ 2ರ ಮಧ್ಯರಾತ್ರಿವರೆಗೆ ಕಾಲಾವಕಾಶ ನೀಡಲಾಗುವುದು ಎಂದು ಹೇಳಿತ್ತು. ಜೊತೆಗೆ, ದೇಶೀಯ ಪ್ರಯಾಣಿಕರಿಗೆ ಕೇಂದ್ರದ 48 ಗಂಟೆಗಳೊಳಗಿನ ಕರೊನಾ ನೆಗೆಟಿವ್​ ವರದಿಯ ಬದಲಿಗೆ 72 ಗಂಟೆಗಳೊಳಗಿನ ನೆಗೆಟಿವ್​ ವರದಿ ಕಡ್ಡಾಯಗೊಳಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ:15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕರೊನಾ;  ಕಂಟೇನ್ಮೆಂಟ್ ವಲಯಗಳಾಗಿ ಸಿದ್ಧಗಂಗಾ, ವರದರಾಜು ನರ್ಸಿಂಗ್ ಕಾಲೇಜು
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಮಿಕ್ರಾನ್​ ಹರಡುವಿಕೆ ತಡೆಯಲು ವಿಧಿಸಿರುವ ನಾಲ್ಕು ನಿಯಮಗಳನ್ನು, ದೇಶದ ಎಲ್ಲೆಡೆ ಏಕರೂಪತೆಯನ್ನು ಕಾಪಾಡಲು, ಕೂಡಲೇ ಜಾರಿಗೊಳಿಸಿ ಆದೇಶ ಹೊರಡಿಸಬೇಕೆಂದು ಕಾರ್ಯದರ್ಶಿ ಭೂಷಣ್​​ ಮಹಾ ಸರ್ಕಾರಕ್ಕೆ ಇಂದು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.(ಏಜೆನ್ಸೀಸ್​​)
VIDEO| ಜೀತೇಗಾ.. ಇಂಡಿಯಾ ಜೀತೇಗಾ! ’83’ ಟ್ರೇಲರ್​ ಬಿಡುಗಡೆ​​

ರಸ್ತೆಗುಂಡಿಗೆ ಸವಾರ ಬಲಿ: ಪಾಲಿಕೆ ಎಇಇ, ಕಂಟ್ರಾಕ್ಟರ್​ ವಿರುದ್ಧ ಕೇಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 11 =
Remember me
