ವಾಷಿಂಗ್ಟನ್‌:ಕೆಲವೊಂದು ವಿಷಯ ತಿಳಿದುಕೊಳ್ಳದಿರುವುದೋ ಒಳ್ಳೆಯದು ಎನ್ನುತ್ತಾರೆ. ಇಲ್ಲಿ ಹೇಳಹೊರಟಿರುವ ವಿಷಯವೂ ಅಂಥದ್ದೇ ಒಂದು. ಇದು ಬಿಯರ್‌ ಪ್ರಿಯರಿಗೆ ಸಂಬಂಧಿಸಿದ ವಿಷಯ.
ಹೌದು. ಭಯಾನಕ ಎನ್ನುವ ವಿಷಯವೊಂದು ಇದೀಗ ಹೊರಬಂದಿದ್ದು, ಅದೀಗ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ. ಈ ಮೂಲಕ ಬಿಯರ್‌ ಪ್ರಿಯರಿಗೆ ಶಾಕಿಂಗ್‌ ಸುದ್ದಿಯೂ ಇದಾಗಿದೆ.ಅಂದಹಾಗೆ ಇದು ಅಮೆರಿಕ ಮೂಲದ ಬಡ್‌ವೀಸರ್‌ ಬ್ರ್ಯಾಂಡ್‌ನ ಬಿಯರ್‌ಗೆ ಸಂಬಂಧಿಸಿದ ವಿಷಯ. ಪ್ರಮುಖ ಬಿಯರ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಡ್‌ವೀಸರ್‌ ಕುರಿತು ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ.ಈ ಬ್ರ್ಯಾಂಡ್‌ನ ಉದ್ಯೋಗಿಯೇ ಆಗಿರುವ ಒಬ್ಬರು ಇದೀಗ ತುಂಬಾ ಅಸಹ್ಯ ಹುಟ್ಟಿಸುವ ಹೇಳಿಕೆ ನೀಡಿದ್ದು, ಅದೀಗ ಎಲ್ಲೆಡೆ ವೈರಲ್‌ ಆಗಿದೆ.
ಇದನ್ನೂ ಓದಿ:ಕೊಳೆತ ಹೆಣ ತೆಗೆಯಲು ಮಕ್ಕಳ ಬಳಕೆ- ಕ್ಯಾಮೆರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!
ಈ ಉದ್ಯೋಗಿ (ಹೆಸರನ್ನು ಬಹಿರಂಗಪಡಿಸಿಲ್ಲ) ಕಳೆದ 12 ವರ್ಷಗಳಿಂದ ಬಡ್‌ವೀಸರ್‌ ಬ್ರ್ಯಾಂಡ್‌ನ ಟ್ಯಾಂಕ್‌ಗಳೊಳಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದನಂತೆ! ಅದನ್ನು ಈತನೇ ಇದೀಗ ಒಪ್ಪಿಕೊಂಡಿದ್ದಾನೆ. ಮೂತ್ರವಿಸರ್ಜನೆ ವೇಳೆ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಹೇಳಿಕೆ ಕೊಟ್ಟಿರುವುದಾಗಿ ವರದಿಯಾಗಿದೆ.
34 ವರ್ಷ ವಯಸ್ಸಿನವರಾಗಿದ್ದಾಗಿನಿಂದ ತಾನು ಈ ಕೆಲಸ ಮಾಡುತ್ತಿರುವುದಾಗಿ ಈತ ಹೇಳಿದ್ದಾನೆ. ವಾಶ್‌ರೂಂ ತುಂಬಾ ದೂರದಲ್ಲಿರುವುದರಿಂದ ಅಲ್ಲಿಗೆ ಹೋಗಲು ನಾನು ಸೋಮಾರಿಯಾಗಿದ್ದೆ, ಆದರೆ ಮತ್ತೆ ನಾನು ಹೀಗೆ ಮಾಡುವುದಿಲ್ಲ, ಇನ್ನು ಮುಂದೆ ನೀವೆಲ್ಲರೂ ಮೂತ್ರಮುಕ್ತ ಬಿಯರ್‌ ಕುಡಿಯಬಹುದು ಎಂಬ ಹೇಳಿಕೆ ನೀಡಿರುವುದಾಗಿ ‘ಹನ್ಸ್‌ ಇಂಡಿಯಾ’ ಪತ್ರಿಕೆ ವರದಿ ಮಾಡಿದೆ.
ಬಡ್‌ವೀಸರ್‌ ಬ್ರೂವರಿ ಎಕ್ಸ್‌ಪೀರಿಯೆನ್ಸ್‌ನ ಫೋರ್ಟ್ ಕಾಲಿನ್ಸ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೆ. ಆದ್ದರಿಂದ ಇಲ್ಲಿ ತಯಾರಾಗುತ್ತಿದ್ದ ತಮ್ಮ ಬ್ರ್ಯಾಂಡ್‌ನ ಬಿಯರ್‌ನಲ್ಲಿ ಮಾತ್ರ ಮೂತ್ರದ ಅಂಶಗಳಿದ್ದು, ಉಳಿದ ನಗರಗಳಲ್ಲಿ ಇದು ಮೂತ್ರ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾನೆ. ಆದರೆ ಶೇ.75ರಷ್ಟು ಬಿಯರ್‌ಗಳು ತಯಾರಾಗುವುದು ಇದೇ ಪ್ರದೇಶದಲ್ಲಿ ಎನ್ನಲಾಗಿದೆ!(ಏಜೆನ್ಸೀಸ್‌)
ಮೂರು ತಿಂಗಳ ಭರ್ಜರಿ ಹನಿಮೂನ್‌ ಮುಗಿಸಿ ಅಂತೂ ಬಂದ ಈ ಜೋಡಿಯೀಗ ಸಕತ್‌ ಫೇಮಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twelve =
Remember me
