ನವದೆಹಲಿ: ಮುಂದಿನ ಹಣಕಾಸು ವರ್ಷ(2020-21) ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ವಿತರಣೆಯ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತ ಈ ವಿಚಾರ ಹೇಳಿದ್ದು, ನಬಾರ್ಡ್​ನ ರೀಫೈನಾನ್ಸ್​ ಸ್ಕೀಮ್​​ ಕೂಡ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಭಾರತೀಯ ರೈಲ್ವೆ ಪಿಪಿಪಿ(ಪಬ್ಲಿಕ್​-ಪ್ರೈವೇಟ್​ ಪಾರ್ಟ್​ನರ್​ಷಿಪ್​) ಮಾದರಿಯಲ್ಲಿ ಕಿಸಾನ್​ ರೈಲ್ ಅನ್ನು ಆರಂಭಿಸಲಿದೆ. ಇದು ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳ ಸಾಗಣೆಗೆ ಇದು ಕೋಲ್ಡ್​ ಸಪ್ಲೈ ಚೇನ್​ ಆಗಿ ಬಳಕೆಯಾಗಲಿದೆ ಎಂದು ಅವರು ವಿವರಿಸಿದರು.
ಇದರ ಜತೆಗೆ, ಕೃಷಿ ಉಡಾನ್​ ಎಂಬ ಯೋಜನೆಯನ್ನೂ ನಾಗರಿಕ ವಿಮಾನ ಯಾನ ಸಚಿವಾಲಯ ಆರಂಭಿಸಲಿದೆ. ಕೃಷಿ ಉತ್ಪನ್ನವನ್ನು ರಾಷ್ಟ್ರಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾಗಿಸಲು ಈ ಯೋಜನೆ ನೆರವಾಗಲಿದೆ ಎಂದರು.
ಕ್ಲಸ್ಟರ್​ ಆಧಾರದಲ್ಲಿ ಒಂದು ಜಿಲ್ಲೆಯಲ್ಲಿ ಒಂದು ತೋಟಗಾರಿಕೆ ಬೆಳೆ ಎಂಬ ಮಾದರಿಯ ಯೋಜನೆಯನ್ನು ಸರ್ಕಾರ ಉತ್ತೇಜಿಸಲಿದೆ. ಈ ರೀತಿಯ ಪ್ರಯೋಗದಿಂದ ಆಹಾರ ಧಾನ್ಯಗಳ ಉತ್ಪಾದನೆ 311 ಎಂಟಿ ದಾಟಿದೆ ಎಂದು ಅವರು ಹೇಳಿದರು.
ಅದೇ ರೀತಿ, ಸಮುದ್ರ ಮೀನುಗಾರಿಕೆ ಸಂರಕ್ಷಣೆ, ಕೃಷಿ ಉತ್ಪನ್ನ ಉಗ್ರಾಣ ಸೌಕರ್ಯ ವೃದ್ಧಿಗೆ ಸ್ವ ಸಹಾಯ ಸಂಘಗಳಿಗೆ ಅನುವು ಮಾಡಿಕೊಡುವ ಕ್ರಮವನ್ನೂ ಸರ್ಕಾರ ಮಾಡಲಿದೆ ಎಂದರು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
