ನವದೆಹಲಿ: ಮಹಿಳೆಯರ ವಿವಾಹ ವಯಸ್ಸು ನಿಗದಿ ಮಾಡುವುದಕ್ಕೆ ಸರ್ಕಾರ ಒಂದು ಟಾಸ್ಕ್​ಫೋರ್ಸ್​ ಅನ್ನು ರಚಿಸಲಿದೆ. ಈ ಟಾಸ್ಕ್​ಫೋರ್ಸ್​ ಎಲ್ಲ ಸಮುದಾಯದವರಿಗೂ ಅನ್ವಯವಾಗುವಂತೆ ಮಹಿಳೆಯರ ವಿವಾಹ ವಯಸ್ಸನ್ನು ನಿಗದಿ ಮಾಡಿ ಶಿಫಾರಸು ಮಾಡಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020 ಮಂಡಿಸುತ್ತ, ಈ ಸಲದ ಮುಂಗಡಪತ್ರದಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಕ್ಕೆ 9,500 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದೇ ರೀತಿ, ಪೌಷ್ಟಿಕಾಂಶ ಸಂಬಂಧಿತ ಕಾರ್ಯಗಳಿಗೆ 35,600 ಕೋಟಿ ರೂಪಾಯಿಯನ್ನು ತೆಗೆದಿರಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ(ಎಸ್​ಸಿ) ಮತ್ತು ಅದರ್ ಬ್ಯಾಕ್​ವರ್ಡ್​ ಕ್ಲಾಸಸ್​ ಸಮುದಾಯದವರಿಗಾಗಿ 85,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್​, ಜಾರ್ಖಂಡ್​ನ ರಾಂಚಿಯಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ ವಿಚಾರ ಪ್ರಸ್ತಾಪಿಸಿದರು. ಅಲ್ಲದೆ,ಹರಿಯಾಣ, ಅಸ್ಸಾಂ, ಉತ್ತರಪ್ರದೇಶ, ಗುಜರಾತ್​, ತಮಿಳುನಾಡುಗಳಲ್ಲಿ ಆನ್​ಸೈಟ್ ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಸಂಸ್ಕೃತಿ ಸಚಿವಾಲಯಕ್ಕ್ರೆ 3,150 ಕೋಟಿ ರೂಪಾಯಿ, ಪ್ರವಾಸೋದ್ಯಮ ಸಚಿವಾಲಯಕ್ಕೆ 2,500 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + nineteen =
Remember me
