ನವದೆಹಲಿ:ಬಹುನಿರೀಕ್ಷಿ 2023-24ನೇ ಸಾಲಿನ ಬಜೆಟ್​ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಬೆಳಗ್ಗೆ 11 ಗಂಟೆಗೆ ಆರಂಭಿಸಿದ್ದಾರೆ. ಸದ್ಯ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಮಂಡನೆ ಆಗುತ್ತಿರುವ ಈ ಬಜೆಟ್​ ವಿಶ್ವದ ಗಮನ ಸೆಳೆದಿದೆ. ಹೀಗಾಗಿ ಜನರು ಕೂಡ ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, 1000 ರೂ. ದಾಟಿರುವ ಸಿಲಿಂಡರ್​ ಬೆಲೆ ಇಳಿಕೆ ಆಗಲಿದೆಯಾ? ಶತಕ ಬಾರಿಸಿರುವ ಪೆಟ್ರೋಲ್​ ದರದಲ್ಲಿ ಕೊಂಚ ನಿರಾಳ ಕಾಣಬಹುದಾ? ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಲಿದೆಯಾ? ಬೀಜ ಗೊಬ್ಬರ ಖರೀದಿಯಲ್ಲಿ ಸಬ್ಸಿಡಿ ಸಿಗುತ್ತಾ? ಈ ಬಾರಿ ಆದಾಯ ತೆರಿಗೆ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಂದಿನ ಬಜೆಟ್​ನಲ್ಲಿ ಉತ್ತರ ಸಿಗಲಿದೆ. ತಜ್ಞರ ಚರ್ಚೆಯನ್ನು ಒಳಗೊಂಡಂತೆ ಬಜೆಟ್​ ಮಂಡನೆಯ ನೇರ ಪ್ರಸಾರವನ್ನು ಈ ಮೇಲಿನ ದಿಗ್ವಿಜಯ 24X7 ನ್ಯೂಸ್ ಯೂಟ್ಯೂಬ್​ ಲೈವ್​ನಲ್ಲಿ ಅಥವಾ ಕೆಳಗಿನ ಫೇಸ್​ಬುಕ್ ಪೇಜ್​ನಲ್ಲಿ ವೀಕ್ಷಿಸಬಹುದಾಗಿದೆ.​

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ​​
ಕೇಂದ್ರ ಬಜೆಟ್​ 2023: ಈ ಬಾರಿಯೂ ಸಾಂಪ್ರದಾಯಿಕ “ಬಹಿ ಖಾತಾ” ಬದಲು ಟ್ಯಾಬ್​ ಮೂಲಕ ಬಜೆಟ್​ ಮಂಡನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಬಜೆಟ್​ ಮಂಡನೆಗೆ ಒಪ್ಪಿಗೆ ಪಡೆದ ವಿತ್ತಸಚಿವೆ

ಆಸ್ತಿಗಾಗಿ ಅಸಹಾಯಕ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ ಮೊಮ್ಮಗನಿಗೆ ತಕ್ಕ ಶಾಸ್ತಿ ಮಾಡಿದ ಮಧುಗಿರಿ ಎಸಿ!

Sign in to your account
Please enter an answer in digits:twenty − ten =
Remember me
