ನವದೆಹಲಿ:ಇಂದು (ಜು.23) ಲೋಕಸಭೆಯಲ್ಲಿ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್​ ಪ್ರಾರಂಭಕ್ಕೂ ಮುನ್ನ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿ, ಬಜೆಟ್​ ಮಂಡನೆ ಆರಂಭಿಸಿದರು. ಹಲವು ವರ್ಗಕ್ಕೆ ಮಹತ್ವದ ಬಜೆಟ್ ಘೋಷಿಸಿರುವ ವಿತ್ತ ಸಚಿವೆ, ಸ್ವಂತ ಉದ್ಯೋಗ ಶುರುಮಾಡಬೇಕು ಎಂದು ದೊಡ್ಡ ಕನಸೇ ಹೊತ್ತಿದ್ದವರಿಗೂ ಈ ಬಾರಿಯ ಬಜೆಟ್​ನಲ್ಲಿ ಸಿಹಿ ಹಂಚಿದ್ದಾರೆ.
ಇದನ್ನೂ ಓದಿ:Union Budget 2024 ; NDA ಮಿತ್ರಪಕ್ಷಗಳಿಗೆ ಮೋದಿ ಸರ್ಕಾರದಿಂದ ಬಂಪರ್​​ ಗಿಫ್ಟ್​​
ಮೊದಲು ಬಿಹಾರದ ಅಭಿವೃದ್ಧಿಗೆ ಯೋಜನೆ, ಹೊಸ ಏರ್​ಪೋರ್ಟ್​​, ಮೆಡಿಕಲ್​​ ಕಾಲೇಜುಗಳು ನಿರ್ಮಾಣ ಮಾಡುವ ಗುರಿ ಮತ್ತು ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್‌ ಸೇರಿದಂತೆ ಬಿಹಾರ್​ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ದೊಡ್ಡ ಮಟ್ಟದ ಕೊಡುಗೆಗಳನ್ನು ನೀಡಿದರು. ಈಶಾನ್ಯ ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ 100ಕ್ಕೂ ಹೆಚ್ಚು ಶಾಖೆಗಳನ್ನು ಸ್ಥಾಪನೆ ಮಾಡಲಿರುವ ಬಗ್ಗೆಯೂ ತಿಳಿಸಿದ್ದಾರೆ.
ಇನ್ನು ಯಾರ ಮೇಲೂ ಅವಲಂಬಿತರಾಗದೆ, ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದು ಕನಸು ಹೊತ್ತಿದ್ದ ಅನೇಕರಿಗೆ ಇಂದಿನ ಕೇಂದ್ರ ಬಜೆಟ್​ನಲ್ಲಿ ಬಂಪರ್ ಘೋಷಣೆ ಸಿಕ್ಕಿದೆ. ಮುದ್ರಾ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದ್ದ ಸಾಲವನ್ನು ಇದೀಗ 10ರಿಂದ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಈ ವಿಷಯದ ಬಗ್ಗೆ ಈಗ ನಾನು ತುಟಿಬಿಚ್ಚಲ್ಲ! ಮುಂದೆ ನೀವೇ ನೋಡ್ತೀರಾ… ನಟಿ ಅಂಜಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 2 =
Remember me
