ನವದೆಹಲಿ:2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭದಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕರೊನಾವನ್ನು 2ನೇ ಮಹಾಯುದ್ದಕ್ಕೆ ಹೋಲಿಸಿದರು. ಕರೊನಾದಿಂದಾಗಿ ಆರ್ಥಿಕಮಟ್ಟ ಕುಸಿದಿದ್ದು, ಭಾರತದ ಆರ್ಥಿಕತೆಗೆ ಈ ಬಜೆಟ್​ ಮುನ್ನುಡಿ ಆಗಲಿದೆ ಎಂದರು.
ಕೋವಿಡ್​ ನಿರ್ವಹಣೆಗಾಗಿ ಶೇ.13 ಹಣ ವಿನಿಯೋಗಿಸಲಾಗಿದೆ. ಕರೊನಾ ವಿರುದ್ಧ ಹೋರಾಟ ಮುಂದುವರಿಯಲಿದೆ. ಶೀಘ್ರದಲ್ಲೇ ಇನ್ನೆರಡು ವ್ಯಾಕ್ಸಿನ್​ ಬರಲಿದೆ ಎಂದ ಸಚಿವೆ, ವ್ಯಾಕ್ಸಿನ್​ ಕಂಡುಹಿಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು. ಕರೊನಾಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಕರೊನಾ ಬಿಕ್ಕಟ್ಟನ್ನು ವಿಶ್ವದಲ್ಲೇ ಭಾರತ ಸಮರ್ಥವಾಗಿ ನಿಭಾಯಿಸಿದೆ ಎಂದ ಸಚಿವೆ, ಭಾರತದ ಮೇಲೆ ವಿಶ್ವದ ಭರವಸೆ ಹೆಚ್ಚಿದೆ ಎಂದರು.ಕರೊನಾದಿಂದಾಗಿ ಬಹುತೇಕರು ಮನೆಯಲ್ಲೇ ಇದ್ದರು. ಲಾಕ್​ಡೌನ್​ ವೇಳೆ ಹಲವು ಪ್ಯಾಕೇಜ್​ ಘೋಷಣೆ ಮಾಡಲಾಯಿತು. ಏಪ್ರಿಲ್​ನಲ್ಲಿ ಮತ್ತೆರಡು ಕರೊನಾ ಲಸಿಕೆ ಮಾರುಕಟ್ಟೆಗೆ ಬರಲಿವೆ. ಎಲ್ಲರ ಸಹಕಾರದಿಂದಾಗಿ ಕರೊನಾ ವಿರುದ್ಧ ಗೆಲುವು ಸಾಧಿಸಿದ್ದೇವೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಎಂದರು.ಇದನ್ನೂ ಓದಿರಿಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್​ ಬೈ: ಬಜೆಟ್​ ಮಂಡನೆಗೆ ಡಿಜಿಟಲ್​ ಸ್ಪರ್ಶ!
ದೇಶದಲ್ಲಿ ಏಕೀಕೃತ ಆರೋಗ್ಯ ವ್ಯವಸ್ಥೆ ಜಾರಿಯಾಗಲಿದ್ದು, ಎಲ್ಲ ಜಿಲ್ಲೆಗಳಲ್ಲೂ ಆರೋಗ್ಯ ಟೆಸ್ಟ್​ ಲ್ಯಾಬ್​ ಸ್ಥಾಪನೆಗೆ ಒತ್ತು ನೀಡಲಾಗುವುದು. 20 ಮೆಟ್ರೋ ಪಾಲಿಟಿನ್​ ಸಿಟಿಗಳಲ್ಲಿ ಅತ್ಯುನ್ನತ ಆರೋಗ್ಯ ಸೇವೆ, ಸಾರ್ವಜನಿಕರ ಆರೋಗ್ಯ ಕಾಪಾಡುವುದು ನಮ್ಮ ಆದ್ಯತೆ ಎಂದರು.
ಒಟ್ಟಾರೆ ಬಜೆಟ್​ ಆರಂಭದಲ್ಲೇ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿದ್ದು, ಆರೋಗ್ಯ ಕ್ಷೇತ್ರಕ್ಕೆ ಈ ಭಾರಿ ಹೆಚ್ಚು ಮನ್ನಣೆ ಸಿಕ್ಕಂತಾಗಿದೆ. ಕರೊನಾ ಸೋಂಕು ತೀವ್ರವಾಗಿ ಕಾಡಿದ ಬಳಿಕ ಆರೋಗ್ಯವೇ ಭಾಗ್ಯ ಎಂಬ ಮಂತ್ರ ಜಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಸಾಂಪ್ರದಾಯಿಕ “ಬಹಿ ಖಾತಾ” ಪದ್ಧತಿಗೆ ಗುಡ್​ ಬೈ: ಬಜೆಟ್​ ಮಂಡನೆಗೆ ಡಿಜಿಟಲ್​ ಸ್ಪರ್ಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fourteen =
Remember me
