ನವದೆಹಲಿ:ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರಿಂದು ತಮ್ಮ 5ನೇ ಬಜೆಟ್​ ಮಂಡಿಸಲಿದ್ದು, ಅದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡರು.
ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡನೆಗೆ ಅನುಮೋದನೆ ಪಡೆದುಕೊಂಡರು. ಇಂದು ಬೆಳಗ್ಗೆ 11 ಗಂಟೆಗೆ ಅವರು ಬಜೆಟ್​ ಮಂಡನೆ ಮಾಡಲಿದ್ದಾರೆ.
ಬಜೆಟ್ ಮಂಡನೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎಲ್ಲ ನಾಯಕರು ಹಾಜರಿದ್ದರು.
ಬಜೆಟ್​ ಅನುಮೋದನೆ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಜೆಟ್​ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ​​ ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.
ಸದ್ಯ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಮಂಡನೆ ಆಗುತ್ತಿರುವ ಈ ಬಜೆಟ್​ ವಿಶ್ವದ ಗಮನ ಸೆಳೆದಿದೆ. ಹೀಗಾಗಿ ಜನರು ಕೂಡ ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, 1000 ರೂ. ದಾಟಿರುವ ಸಿಲಿಂಡರ್​ ಬೆಲೆ ಇಳಿಕೆ ಆಗಲಿದೆಯಾ? ಶತಕ ಬಾರಿಸಿರುವ ಪೆಟ್ರೋಲ್​ ದರದಲ್ಲಿ ಕೊಂಚ ನಿರಾಳ ಕಾಣಬಹುದಾ? ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಲಿದೆಯಾ? ಬೀಜ ಗೊಬ್ಬರ ಖರೀದಿಯಲ್ಲಿ ಸಬ್ಸಿಡಿ ಸಿಗುತ್ತಾ? ಈ ಬಾರಿ ಆದಾಯ ತೆರಿಗೆ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಂದಿನ ಬಜೆಟ್​ನಲ್ಲಿ ಉತ್ತರ ಸಿಗಲಿದೆ.(ಏಜೆನ್ಸೀಸ್​)
#WATCH| Delhi: Copies of#UnionBudget2023arrive at the Parliament.pic.twitter.com/lkmcKrIRpu
— ANI (@ANI)February 1, 2023

#WATCH| Delhi: A sniffer dog sniffs copies of#UnionBudget2023that have been brought to the Parliament.pic.twitter.com/VjhFllJuLf
— ANI (@ANI)February 1, 2023

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಬಜೆಟ್​ ಮಂಡನೆಗೆ ಒಪ್ಪಿಗೆ ಪಡೆದ ವಿತ್ತಸಚಿವೆ

ಕೇಂದ್ರ ಬಜೆಟ್​ 2023: ಈ ಬಾರಿಯೂ ಸಾಂಪ್ರದಾಯಿಕ “ಬಹಿ ಖಾತಾ” ಬದಲು ಟ್ಯಾಬ್​ ಮೂಲಕ ಬಜೆಟ್​ ಮಂಡನೆ

ಆಸ್ತಿಗಾಗಿ ಅಸಹಾಯಕ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ ಮೊಮ್ಮಗನಿಗೆ ತಕ್ಕ ಶಾಸ್ತಿ ಮಾಡಿದ ಮಧುಗಿರಿ ಎಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − thirteen =
Remember me
