ನವದೆಹಲಿ:ನಕ್ಸಲರ ಸಮಸ್ಯೆ ನಿವಾರಣೆ ಹಾಗೂ ನಕ್ಸಲೀಯ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕಾಗಿ ಗೃಹ ಸಚಿವ ಅಮಿತ್​ ಷಾ ನೇತೃತ್ವದಲ್ಲಿ ಶನಿವಾರ (ಆಗಸ್ಟ್​​ 24) ಸಮನ್ವಯ ಸಭೆ ನಡೆಯುತ್ತಿದೆ. ಮುಂದಿನ ಒಂದು ವರ್ಷದಲ್ಲಿ ನಕ್ಸಲರ ಚಟುವಟಿಕೆಗಳನ್ನು ಕೊನೆಗೊಳಿಸುವ ಗುರಿಯನ್ನು ಕೇಂದ್ರ ಹೊಂದಿದೆ.
ಇದನ್ನು ಓದಿ:ಬದ್ಲಾಪುರ ಲೈಂಗಿಕ ದೌರ್ಜನ್ಯ ಕೇಸ್​​; ಬಂದ್​​​ ಬದಲಿಗೆ ಕಪ್ಪು ಪಟ್ಟಿ ಧರಿಸಿ ಎಂವಿಎ ನಾಯಕರು ಪ್ರೊಟೆಸ್ಟ್​​​
ಉನ್ನತ ಮಟ್ಟದ ಸಭೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್​​​​ಸಾಯಿ, ಉಪಮುಖ್ಯಮಂತ್ರಿ ವಿಜಯ್ ಶರ್ಮಾ, ಸಚಿವ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ, ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮುಖ್ಯಸ್ಥರು ಭಾಗವಹಿಸಿದ್ದಾರೆ.
ಮುಂದಿನ ಒಂದೆರಡು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು (ಎಲ್‌ಡಬ್ಲ್ಯುಇ) ದೇಶದಿಂದ ತೊಡೆದುಹಾಕಬೇಕು ಎಂದು ಗೃಹ ಸಚಿವರು ನಿರ್ದೇಶಿಸಿದ್ದಾರೆ. ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಕ್ಸಲೀಯರ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂಬುದು ಈ ಸಭೆಯ ಮುಖ್ಯ ಅಜೆಂಡವಾಗಿದೆ.
ಡಿಸೆಂಬರ್ 2023 ರಿಂದ ಈ ತಿಂಗಳವರೆಗೆ ಭದ್ರತಾ ಪಡೆಗಳು ಮವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 147 ನಕ್ಸಲರನ್ನು ಎನ್​ಕೌಂಟರ್​ ಮಾಡಲಾಗಿದೆ. ಅಲ್ಲದೆ 723 ನಕ್ಸಲ್ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, 622 ಮಂದಿ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)
ವಿಶ್ವದಲ್ಲೇ ಅತಿ ಹೆಚ್ಚು ಟ್ಯಾಟೂ ಹೊಂದಿರುವ ಮಹಿಳೆ ಇವರೇ ನೋಡಿ; ಗಿನ್ನಿಸ್​ ರೆಕಾರ್ಡ್​​ ಸೇರಿದ ಎಸ್ಪೆರೆನ್ಸ್​​ ಫರ್ಜಿನಾ ಹೇಳಿದಿಷ್ಟು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 1 =
Remember me
